ತಪಾಸಣೆ ವೇಳೆ ಅತಿ ವೇಗವಾಗಿ ಟ್ರಕ್ ಚಾಲನೆ, ಐವರು ಪೊಲೀಸರು ಸ್ಥಳದಲ್ಲೇ ಸಾವು

Truk--01

ಪಟ್ನಾ , ಸೆ.11- ಬಿಹಾರದಲ್ಲಿ ಪೊಲೀಸರ ಜೀವಕ್ಕೆ ಭದ್ರತೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂದು ಬೆಳಗ್ಗೆ ಅಪಾರ ಪ್ರಮಾಣದ ಮದ್ಯ ಸಾಗಣೆ ಯಾಗುತ್ತಿದೆ ಎಂಬ ಸುಳಿವು ದೊರೆತು ತಪಾಸಣೆ ನಡೆಸಲು ಹೋಗಿದ್ದಾಗ ಪೊಲೀಸರ ಮೇಲೆ ಚಾಲಕ ಅತಿ ವೇಗವಾಗಿ ಟ್ರಕ್ ಅನ್ನು ಚಲಾಯಿಸಿದ ಪರಿಣಾಮ ಐವರು ಪೊಲೀಸರು ಸ್ಥಳದಲ್ಲೇ ತಮ್ಮ ಜೀವವನ್ನು ಕಳೆದು ಕೊಂಡಿದ್ದಾರೆ.

ಘಟನೆಯು ಬಿಹಾರದ ಮುಜಾಫರ್ ಜಿಲ್ಲೆಯ , ಪಾನಾಪುರ್ ಚೆಕ್ ಪೋಸ್ಟ್ ಬಳಿ ನಡೆದಿದ್ದು , ಐವರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಡಿಎಸ್‍ಪಿ ಕೃಷ್ಣ ಮುರಾರಿ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಚೆಕ್‍ ಪೋಸ್ಟ್‍ನ ಅಧಿಕಾರಿ ಧ್ರುವ ನಾಥ್ ಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲೂ ಕೂಡ ನಾಲ್ವರು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಅಕುರಾಹನ್
ದಾಲಾ ಚೆಕ್ಟ್‍ ಪೋಸ್ಟ್ ನಲ್ಲಿ ನಡೆದಿದೆ.

Facebook Comments

Sri Raghav

Admin