ದಿಗ್ಬಂಧನಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ : ಅಮೆರಿಕಕ್ಕೆ ‘ಕಿರಿಕ್’ ಕೊರಿಯಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Trump-North-korea

ಟೋಕಿಯೊ, ಸೆ.11- ಮತ್ತೆ ಹೊಸದಾಗಿ ದಿಗ್ಬಂಧನ ಹೇರಿದರೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಗಂಭೀರ ಎಚ್ಚರಿಕೆ ನೀಡಿದೆ.  ಆತಂಕಕಾರಿ ಅಣ್ವಸ್ತ್ರ ಪರೀಕ್ಷೆಗಳ ಹಿನ್ನೆಲೆಯಲ್ಲಿ ಪಯೊಂಗ್‍ಯಾಂಗ್ ಮೇಲೆ ಅತ್ಯಂತ ಕಠಿಣ ದಿಗ್ಬಂಧನ ಹೇರಬೇಕೆಂದು ವಾಷಿಂಗ್ಟನ್ ಸಲ್ಲಿಸಿರುವ ಪ್ರಸ್ತಾವನೆಯು ಒಂದು ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅನುಮೋದಿಸಲ್ಪಟ್ಟರೆ ಅಮೆರಿಕ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಉತ್ತರ ಕೊರಿಯಾ ಗುಡುಗಿದೆ.

ಈ ಕುರಿತು ಇಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಉತ್ತರ ಕೊರಿಯಾ ವಿದೇಶಾಂಗ ಸಚಿವರು, ಅಮೆರಿಕದ ಮುಂದಿನ ನಡೆಯನ್ನು ನಾವು ಗಮನಿಸುತ್ತಿದ್ದೇವೆ. ಯಾವುದೇ ವ್ಯತಿರಿಕ್ತ ನಿರ್ಧಾರ ಕೈಗೊಂಡರೆ ತಮ್ಮದೇ ಆದ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸುತ್ತೇವೆ. ಇದರಿಂದ ಅಮೆರಿಕ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ.

Facebook Comments

Sri Raghav

Admin