ನೀರ್ಗಲ್ಲು ಕುಸಿತ, ಹಿಮಪಾತ ಭೀತಿ : ನೂರಾರು ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Truft--b01

ಜಿನೇವಾ, ಸೆ.11-ಸ್ವಿಟ್ಜರ್‍ಲೆಂಡ್‍ನ ಟ್ರೆಫ್ಟ್ ನಲ್ಲಿರುವ ಅಲ್‍ಪೈನ್ ನೀರ್ಗಲ್ಲು ಪ್ರದೇಶವು ಕುಸಿದು ಭಾರೀ ಹಿಮಪಾತವಾಗುವ ಭೀತಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ನೂರಾರು ಜನರನ್ನು ಸ್ವೀಸ್ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಟ್ರಿಫ್ಸ್ ನೀರ್ಗಲ್ಲು ಮೇಲ್ಭಾಗದಲ್ಲಿ ಗಣನೀಯ ಚಲನೆಯನ್ನು ಭೂಗರ್ಭಶಾಸ್ತ್ರಜ್ಞರು ಗಮನಿಸಿದ್ದಾರೆ. ಈ ನೀರ್ಗಲ್ಲು ಒಂದೇ ದಿನ 130 ಸೆಂ.ಮೀ. ಚಲಿಸಿದ್ದು ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕವಿದೆ.

ನೀರ್ಗಲ್ಲು ಕುಸಿದು ಬಿದ್ದಲ್ಲಿ ಭಾರೀ ಹಿಮಪಾತವಾಗಿ ಅಲ್ಲಿರುವ ಸಾದ್-ಗ್ರುಂಡ್ ಗ್ರಾಮ ನಿರ್ನಾಮವಾಗುವ ಸಾಧ್ಯತೆ ಇದ್ದು, ಈಗಾಗಲೇ 300ಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಲಾಗಿದೆ.

Facebook Comments

Sri Raghav

Admin