ಪತಿ ಆರೋಗ್ಯ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಜಾಮೀನಿಗೆ ಶಶಿಕಲಾ ಅರ್ಜಿ

Sasikala--01

ಬೆಂಗಳೂರು, ಸೆ.11- ಪತಿ ಆರೋಗ್ಯ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಶಶಿಕಲಾ ನಟರಾಜನ್ ಸುಪ್ರೀಂ ಕೋರ್ಟ್‍ಗೆ ಮತ್ತೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಅಸ್ವಸ್ಥಗೊಂಡಿರುವ ಶಶಿಕಲಾ ಅವರ ಪತಿ ಎಂ.ನಟರಾಜನ್ ಅವರನ್ನು ನೋಡಿಕೊಳ್ಳಲು ಅವಕಾಶಕ್ಕಾಗಿ ಶಶಿಕಲಾ ಅವರು ಜಾಮೀನಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟರಾಜನ್ ಅವರ ಆರೋಗ್ಯ ವಿಷಮ ಸ್ಥಿತಿ ತಲುಪಿದ್ದು , ಕಳೆದ ರಾತ್ರಿ 8 ಗಂಟೆಗಳ ಕಾಲ ಡಯಾಲಿಸಿಸ್‍ಗೆ ಒಳಗಾಗಿದ್ದಾರೆ. ಮತ್ತು ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

Facebook Comments

Sri Raghav

Admin