ಮುಸ್ಲಿಂ ಕಲಾವಿದರಿಂದ ರಾಮಲೀಲಾ ಪೌರಾಣಿಕ ನಾಟಕ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Muslim-Artist--01

ಲಕ್ನೋ, ಸೆ.11- ಉತ್ತರ ಪ್ರದೇಶದ ಲಕ್ನೋ ಹಾಗೂ ಅಯೋಧ್ಯಾದಲ್ಲಿ ಇದೇ 13ರಿಂದ 15ರವರೆಗೆ ನಡೆಯಲಿರುವ ರಾಮಲೀಲಾ ಪೌರಾಣಿಕ ನಾಟಕದಲ್ಲಿ ಇಂಡೋನೇಷಿಯಾದ 12 ಮಂದಿ ಮುಸ್ಲಿಂ ಕಲಾವಿದರು ಅಭಿನಯಿಸಲಿದ್ದಾರೆ. ಸೆ.13ರಂದು ಲಕ್ನೋ ಹಾಗೂ ಸೆ.15ರಂದು ಅಯೋಧ್ಯಾದಲ್ಲಿ ರಾಮಲೀಲಾ ನಾಟಕ ನಡೆಯಲಿದೆ. ಈ ಸಂದರ್ಭದಲ್ಲಿ ಮಾಂಸ ಆಹಾರವನ್ನು ನಿಷೇಧಿಸಲಾಗಿದೆ. ಈ ನಾಟಕವನ್ನು ಆಯೋಜಿಸುವುದರೊಂದಿಗೆ ಹೊರ ದೇಶಗಳಿಗೆ ಸಾಂಸ್ಕøತಿಕ ಏಕೀಕರಣ ಸಂದೇಶ ರವಾನಿಸುವ ಮುಖ್ಯ ಉದ್ದೇಶವನ್ನು ಹೊಂದಲಾಗಿದೆ ಎಂದು ಉತ್ತರ ಪ್ರದೇಶದ ಸಂಸ್ಕøತಿ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮೀನಾರಾಯಣ್ ಚೌದರಿ ತಿಳಿಸಿದ್ದಾರೆ.

ಇಂಡೋನೇಷಿಯಾದ ಈ 12 ಮಂದಿ ಕಲಾವಿದರು 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ರಾಮಲೀಲಾ ನಾಟಕವನ್ನು ಪ್ರದರ್ಶನ ಮಾಡಿದ್ದು, ಮುಸ್ಲಿಂ ಕಲಾವಿದರು ಈ ನಾಟಕವನ್ನು ಪ್ರದರ್ಶನ ಮಾಡುವುದರಿಂದ ಯಾವುದೇ ಸಮಸ್ಯೆ ಉದ್ಬವವಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin