ಮೊದಲು ಒಟ್ಟಿಗೆ ಕೂತು ಪಾರ್ಟಿ ಮಾಡಿದರು ನಂತರ ರುಂಡ ಕತ್ತರಿಸಿಕೊಂಡುಹೋದರು ..!

ಈ ಸುದ್ದಿಯನ್ನು ಶೇರ್ ಮಾಡಿ

Murdr--01

ಬೆಂಗಳೂರು,ಸೆ.11-ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕತ್ತು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿ ಮುಂಡವನ್ನು ಸ್ಥಳದಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಹೋಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಚಿಕ್ಕ ತೋಗೂರಿನ ನೈಸ್ ರಸ್ತೆಯ ಟೋಲ್ ಸಮೀಪದ ಖಾಲಿ ಜಾಗದ ಪೊದೆಯೊಳಗೆ ತಲೆ ಇಲ್ಲದ ದೇಹ ಮಾತ್ರ ಪತ್ತೆಯಾಗಿದೆ. ಈ ಜಾಗದಲ್ಲಿ ದುಷ್ಕರ್ಮಿಗಳು ಪಾರ್ಟಿ ಮಾಡಿದ್ದು , ಈ ವೇಳೆ ವ್ಯಕ್ತಿಯೊಬ್ಬನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ತಲೆಯೊಂದಿಗೆ ಪರಾರಿಯಾಗಿದ್ದಾರೆ.

ಸಾರ್ವಜನಿಕರು ಬೆಳಗ್ಗೆ ಇದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು , ರುಂಡ ತೆಗೆದುಕೊಂಡು ಹೋಗಿರುವ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಸುಮಾರು 25-30 ವರ್ಷದಂತೆ ಕಾಣುವ ಈ ವ್ಯಕ್ತಿ ಯಾರು, ಯಾತಕ್ಕಾಗಿ ಈತನನ್ನು ಕೊಲೆ ಮಾಡಿ ತಲೆಯನ್ನು ಹೊತ್ತೊಯ್ದಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Facebook Comments

Sri Raghav

Admin