ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ರಾಸಾಯಾನಿಕ ಬಾಂಬ್..!

Vidhanasoudha--01

ಬೆಂಗಳೂರು, ಸೆ.11- ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ರಾಸಾಯಾನಿಕ ಬಾಂಬ್ ಇಟ್ಟಿದ್ದಾರೆ ಎಂದು ಕಿಡಿಗೇಡಿಗಳು ಕರೆ ಮಾಡಿದ್ದರಿಂದ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ವಿಧಾನಸೌಧದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ದುಷ್ಕರ್ಮಿಯೊಬ್ಬ ವಿಧಾನಸೌಧಕ್ಕೆ ಬಾಂಬ್ ಇಟ್ಟಿದ್ದೇವೆ ಎಂದು ಹೇಳಿದ್ದಾನೆ.  ಇದನ್ನು ಕೇಳಿ ಹೌಹಾರಿದ ಪೊಲೀಸರು ಇಡೀ ವಿಧಾನಸೌಧವನ್ನು ಜಾಲಾಡಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸರು, ಅಧಿಕಾರಿಗಳು, ಶ್ವಾನದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಲ್ಲಿ ಏನೂ ಪತ್ತೆಯಾಗಿಲ್ಲ. ಇದೊಂದು ಬೆದರಿಕೆ ಕರೆ ಎಂದು ಪೊಲೀಸರು ನಿಟ್ಟಿಸಿಬಿಟ್ಟಿದ್ದಾರೆ. ಆತ ಎಲ್ಲಿಂದ ಯಾವ ಸ್ಥಳದಿಂದ ಕಾಲ್ ಮಾಡಿದ್ದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Facebook Comments

Sri Raghav

Admin