ಹೊಸ ಇತಿಹಾಸ ಸೃಷ್ಟಿಸಿದ ರಾಫೆಲ್ ನಡಾಲ್

ಈ ಸುದ್ದಿಯನ್ನು ಶೇರ್ ಮಾಡಿ

Nadal--01

ನ್ಯೂಯಾರ್ಕ್,ಸೆ.11-ಯುಎಸ್ ಓಪನ್ ಟೆನಿಸ್ ಗ್ರ್ಯಾಂಡ್‍ಸ್ಲಾಮ್ ಗೆಲ್ಲುವ ಮೂಲಕ ಸ್ಪೇನ್‍ನ ರಾಫೆಲ್ ನಡಾಲ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಣ್ಣಿನ ಅಂಗಳದ ರಾಜನೆಂದೇ ಖ್ಯಾತಿ ಪಡೆದಿರುವ ನಡಾಲ್ ಇಂದು ಹುಲ್ಲು ಹಾಸಿನ ಅಂಗಳದಲ್ಲೂ ತಮ್ಮ ಪ್ರಾಬಲ್ಯವಿದೆ ಎಂಬುದನ್ನು ಯುಎಸ್ ಓಪನ್ ಗ್ರ್ಯಾಂಡ್‍ಸ್ಲಾಮ್ ಗೆಲ್ಲುವ ಮೂಲಕ ತೋರಿಸಿದ್ದಾರೆ. ಇದು ನಡಾಲ್ ಅವರ 16ನೇ ಬಾರಿಗೆ ಗ್ರ್ಯಾಂಡ್‍ಸ್ಲಾಮ್ ಚಾಂಪಿಯನ್ ಮಟ್ಟ ಪಡೆದಿದ್ದರೂ ಹುಲ್ಲುಹಾಸಿನ ಮೇಲೆ ಅವರ ಆಟ ನಡೆಯೋಲ್ಲ ಎಂದು ಕಳೆದ ಐದಾರು ವರ್ಷಗಳಲ್ಲಿ ಪದೇ ಪದೇ ಸಾಬೀತಾಗುತ್ತಿತ್ತು.

ಇಂದು ನಡೆದ ಫೈನಲ್ ಪಂದ್ಯದಲ್ಲಿ ದ.ಆಫ್ರಿಕಾದ ಕೆವಿನ್ ಆ್ಯಂಡರ್‍ಸನ್ ಅವರನ್ನಯು 6-3, 6-3, 6-4 ನೇರ ಸೆಟ್‍ಗಳಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಗೆದ್ದಿದ್ದಾರೆ.  ಇದು ನನ್ನ ಟೆನಿಸ್ ಜೀವನದ ಬಹು ಅವಿಸ್ಮರಣೀಯ ಕ್ಷಣವಾಗಿದ್ದು , ನನ್ನ ತೋಳಿನಲ್ಲಿ ಇನ್ನು ಬಲವಿದೆ ಎಂಬುದನ್ನು ತೋರಿಸಿದ್ದೇನೆ. ಮುಂದೆಯೂ ನನ್ನ ಹೋರಾಟ ಮುಂದುವರೆಯಲಿದೆ ಎಂದು ರಾಫೆಲ್ ನಡಾಲ್ ಉದ್ಗರಿಸಿದ್ದಾರೆ.   ಸೆಮಿಫೈನಲ್ ಹಂತದಲ್ಲಿ ಸ್ವಿಟ್ಜ್ರಲೆಂಡ್‍ನ ರೋಜರ್ ಫೆಡರರ್ ಅವರು ಪರಾಭವಗೊಂಡ ಹಿನ್ನೆಲೆಯಲ್ಲಿ ನಡಾಲ್ ಮೇಲೆ ಟೆನಿಸ್ ಪ್ರಿಯರು ಭಾರೀ ಭರವಸೆ ಹೊಂದಿದ್ದರು. ಅದನ್ನು ಸಾಬೀತು ಮಾಡಿದ್ದಾರೆ.

Facebook Comments

Sri Raghav

Admin