ಅನಂತ್‍ಕುಮಾರ್ ಹೆಗಡೆ ‘ಎಡಬಿಡಂಗಿ’ ಹೇಳಿಕೆಗೆ ದೇಶಪಾಂಡೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಕಾರವಾರ, ಸೆ.12-ಯಾರೂ ಕೂಡ ಪತ್ರಕರ್ತರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಪತ್ರಿಕಾರಂಗಕ್ಕೆ ತನ್ನದೆ ಆದ ಗೌರವ ಇದೆ. ಪತ್ರಿಕಾರಂಗದ ವಿರುದ್ಧ ಟೀಕಿಸುವುದು ಖಂಡನೀಯ ಎಂದರು. ಸಮಾರಂಭವೊಂದರಲ್ಲಿ ಅನಂತ್‍ಕುಮಾರ್ ಹೆಗಡೆ ಅವರು ಮಾತಿನ ಬರದಲ್ಲಿ ಪತ್ರಿಕಾ ರಂಗದಲ್ಲಿ ಎಡಬಿಡಂಗಿಗಳೇ ತುಂಬಿಕೊಂಡಿದ್ದಾರೆ. ಸರಿಯಾಗಿ ಬರೆಯಲು ಬಾರದವರೆಲ್ಲ ಇದ್ದಾರೆ ಎಂಬರ್ಥದಲ್ಲಿ ಭಾಷಣ ಬಿಗಿದಿದ್ದರು.

ಈ ಕುರಿತು ಖಾರವಾಗಿಯೇ ಪ್ರತಿಕ್ರಿಯಿಸಿದ ದೇಶಪಾಂಡೆ ಯಾವುದೇ ಜನಪ್ರತಿನಿಧಿಗಳ ಭಾಷಣಕ್ಕೆ ಗೌರವ ಸಿಗಬೇಕಾದರೆ ಪತ್ರಿಕಾರಂಗದ ಕೊಡುಗೆ ಅಗತ್ಯವಿದೆ. ಹೀಗಿರುವಾಗ ಅನಂತ್‍ಕುಮಾರ್ ಹೆಗಡೆಯವರು ಹಿಂದು ಮುಂದು ನೋಡದೆ ಪತ್ರಕರ್ತರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಇದು ಖಂಡನೀಯ ಎಂದರು.

Facebook Comments

Sri Raghav

Admin