ಅಮೆರಿಕದಲ್ಲಿ ರಾಹುಲ್‍ರಿಂದ ಪ್ರಧಾನಿ ಮೋದಿಗೆ ಅಗೌರವ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ವಾಷಿಂಗ್ಟನ್, ಸೆ.12-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲೂ ಅದನ್ನು ಮುಂದುವರಿಸಿದ್ದಾರೆ. ಮೋದಿಯವರ ನೀತಿಗಳಿಂದಾಗಿ ಭಾರತೀಯ ಆರ್ಥಿಕತೆ ಭಾರೀ ಹಾನಿಯಾಗಿದೆ ಎಂದು ಟೀಕಿಸಿದ್ದಾರೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್-ಎಐ) ಕಲಿಕೆ ಉದ್ದೇಶಕ್ಕಾಗಿ ನಿನ್ನೆ ಅಮೆರಿಕಕ್ಕೆ ಆಗಮಿಸಿದ ರಾಹುಲ್ ಎರಡು ವಾರಗಳ ಕಾಲ ಅಲ್ಲಿ ವಿವಿಧ ಸಮಾವೇಶ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮೂಹ ಉದ್ದೇಶಿ ಮಾತನಾಡಿದ ಅವರು, ಅಪನಗದೀಕರಣ ಮತ್ತು ತರಾತುರಿಯ ಜಿಎಸ್‍ಟಿ ಅನ್ವಯದಂಥ ಅಪಾಯಕಾರಿ ಮತ್ತು ಬೇಜವಾಬ್ದಾರಿ ನಿರ್ಧಾರಗಳಿಂದ ಭಾರತದ ಅರ್ಥ ವ್ಯವಸ್ಥೆಗೆ ಮೋದಿ ದೊಡ್ಡ ಮಟ್ಟದ ಹೊಡೆತ ನೀಡಿದ್ಧಾರೆ ಎಂದು ಛೇಡಿಸಿದರು.  ಮುಖ್ಯ ಆರ್ಥಿಕ ಸಲಹೆಗಾರರು ಮತ್ತು ಸಂಸತ್ತಿನ ಸಲಹೆ ಪಡೆಯದೇ ನವೆಂಬರ್ 8ರಂದು ಪ್ರಧಾನಿ ಕೈಗೊಂಡ ನೋಟು ಅಮಾನ್ಯೀಕರಣ ನಿರ್ಧಾರದಿಂದ ದೇಶದ ಮೇಲೆ ವಿನಾಶಕಾರಿ ಹೊರೆ ಹೊರೆಸಿ ಜನರು ತತ್ತರಿಸುವಂತೆ ಮಾಡಿದರು ಎಂದು ರಾಹುಲ್ ವಾಕ್ ಪ್ರಹಾರ ನಡೆಸಿದರು.

ಉದ್ಯೋಗ ಸೃಷ್ಟಿಸುವಲ್ಲಿಯೂ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತಿ ದಿನ 30,000 ನವಯುವಕರು ಉದ್ಯೋಗ ಮಾರುಕಟ್ಟೆ ಪ್ರವೇಶಿಸಲು ಅವಕಾಶವಿದ್ದರೂ, ಸರ್ಕಾರ ಒಂದು ದಿನಕ್ಕೆ ಕೇವಲ 500 ಉದ್ಯೋಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷರು ಟೀಕಿಸಿದರು.
ಈ ರೀತಿ ಸರ್ಕಾರದ ನೀತಿಗಳನ್ನು ಟೀಕಿಸುವ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿಗೆ ಅಗೌರವ ತೋರಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

 

Facebook Comments

Sri Raghav

Admin