ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಾಳೆ ಮಾಡಬೇಕಾದ ಕೆಲಸವನ್ನು ಈ ದಿನವೇ ಮಾಡಬೇಕು. ಅಪರಾಹ್ನದಲ್ಲಿ ಮಾಡಬೇಕಾದ್ದನ್ನು ಪೂರ್ವಾಹ್ನದಲ್ಲಿ ಮಾಡಬೇಕು. ಏಕೆಂದರೆ, ಈತನು ಕೆಲಸವನ್ನು ಮಾಡಿ ಮುಗಿಸಿದನೇ, ಇಲ್ಲವೆ ಎಂದು ಮೃತ್ಯುವು ಕಾಯುವುದಿಲ್ಲ.– ಮಾಹಭಾರತ, ಶಾಂತಿ

Rashi

ಪಂಚಾಂಗ : ಮಂಗಳವಾರ, 12.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.23
ಚಂದ್ರ ಅಸ್ತ ಬೆ.11.30 / ಚಂದ್ರ ಉದಯ ರಾ.11.26
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ : ಸಪ್ತಮಿ (ರಾ.01.02)
ನಕ್ಷತ್ರ: ಕೃತ್ತಿಕಾ (ಬೆ.07.56) / ಯೋಗ: ಹರ್ಷಣ (ಬೆ.09.54)
ಕರಣ: ಭದ್ರೆ-ಭವ (ಮ.02.04-ರಾ.01.02)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 27

 

ರಾಶಿ ಭವಿಷ್ಯ :

ಮೇಷ : ಸಮಾಜ ಸೇವಕರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ, ಲಾಭದಾಯಕ ದಿನ
ವೃಷಭ : ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
ಮಿಥುನ: ರಾಜಕೀಯ ಮುಖಂಡರ ಜೊತೆ ಕಾದಾಟವಾಗಬಹುದು, ಅನಾವಶ್ಯಕ ತಿರುಗಾಟ
ಕಟಕ : ಕುಟುಂಬದಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ
ಸಿಂಹ: ವ್ಯಾಪಾರ-ವ್ಯವ ಹಾರಗಳಲ್ಲಿ ತೊಂದರೆ
ಕನ್ಯಾ: ಹೆಂಡತಿಯ ಕಡೆಯಿಂದ ಆಸ್ತಿ ಬರುವ ಸಂಭವವಿದೆ

ತುಲಾ: ನೆರೆಹೊರೆಯವರಲ್ಲಿ ವೈರತ್ವ ಉಂಟಾಗಬಹುದು
ವೃಶ್ಚಿಕ : ನ್ಯಾಯಾಲಯದಲ್ಲಿನ ತೀರ್ಪು ಮುಂದಕ್ಕೆ ಹೋಗುತ್ತದೆ
ಧನುಸ್ಸು: ಭೋಗವಸ್ತು ಖರೀದಿಯಿಂದ ಹಣ ವ್ಯಯ
ಮಕರ: ಉದ್ಯೋಗಸ್ಥರಿಗೆ ಬಡ್ತಿ ದೊರೆಯ ಬಹುದು, ಕೆಲವರಿಗೆ ಸಂತಾನ ಭಾಗ್ಯವಿದೆ
ಕುಂಭ: ವ್ಯಾಪಾರಸ್ಥರಿಗೆ, ಬರಹಗಾರರಿಗೆ, ಮುದ್ರಕ ರಿಗೆ, ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕ ದಿನ
ಮೀನ: ಕುಲದೇವತಾ ದರ್ಶನ ಮಾಡುವ ಯೋಗ, ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin