ಉತ್ತರ ಕೊರಿಯಾ ಮೇಲೆ ಕಠಿಣ ದಿಗ್ಬಂಧನ ವಿಧಿಸಿದ ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

North-Korea

ವಾಷಿಂಗ್ಟನ್, ಸೆ.12-ಸರಣಿ ಅಣ್ವಸ್ತ್ರಗಳ ಪ್ರಯೋಗದ ಮೂಲಕ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‍ಎಸ್‍ಸಿ) ಮತ್ತಷ್ಟು ಕಠಿಣ ದಿಗ್ಬಂಧನ ವಿಧಿಸಿದೆ. ಉತ್ತರ ಕೊರಿಯಾದ ಪ್ರಮುಖ ರಫ್ತು ವಹಿವಾಟಿಗೆ ಕಡಿವಾಣ ಹಾಕುವುದರ ಜೊತೆಗೆ ಅದಕ್ಕೆ ನೀಡುತ್ತಿರುವ ತೈಲದಲ್ಲಿ ಶೇಕಡ 30ರಷ್ಟು ಪ್ರಮಾಣವನ್ನು ಮೊಟಕುಗೊಳಿಸಲು ವಿಶ್ವಸಂಸ್ಥೆ ಸರ್ವಾನುಮತದ ನಿರ್ಧಾರ ಕೈಗೊಂಡಿದೆ.

ಮತ್ತೆ ಹೊಸದಾಗಿ ದಿಗ್ಬಂಧನ ಹೇರಿದರೆ ಅಮೆರಿಕ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಗಂಭೀರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದ್ದು, ಮುಂದಿನ ವಿದ್ಯಮಾನ ಕುತೂಹಲಕಾರಿಯಾಗಿದೆ. ಯುದ್ಧೋನ್ಮಾದದಲ್ಲಿರುವ ಪಯೊಂಗ್‍ಯಾಂಗ್ ಮೇಲೆ ಅತ್ಯಂತ ಕಠಿಣ ದಿಗ್ಬಂಧನ ವಿಧಿಸಬೇಕೆಂಬ ಅಮೆರಿಕ ಬೆಂಬಲಿತ ನಿರ್ಣಯಕ್ಕೆ ಯುಎನ್‍ಎಸ್‍ಸಿಯ 15 ಸದಸ್ಯ ರಾಷ್ಟ್ರಗಳು ಒಕ್ಕೊರಲ ಬೆಂಬಲ ನೀಡಿವೆ.

ಅಣ್ವಸ್ತ್ರಗಳಿಂದ ಭೀತಿ ಒಡ್ಡುತ್ತಿರುವ ಉತ್ತರ ಕೊರಿಯಾದ ಕ್ರಮಕ್ಕೆ ವಿಶ್ವವು ಸಮ್ಮತಿಸುವುದಿಲ್ಲ. ಅಣ್ವಸ್ತ್ರ ಕಾರ್ಯಕ್ರಮಗಳನ್ನು ಪಯೊಂಗ್‍ಯಾಂಗ್ ನಿಲ್ಲಿಸದಿದ್ದರೆ, ಅದನ್ನು ತಡೆಗಟ್ಟಲು ನಾವೇ ಮುಂದಾಗುತ್ತೇವೆ ಎಂದು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲಿ ತಿಳಿಸಿದ್ದಾರೆ.

Facebook Comments

Sri Raghav

Admin