ಐಎಸ್ ಉಗ್ರರ ವಶದಲ್ಲಿದ್ದ ಕೇರಳ ಪಾದ್ರಿಯ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Father-ISIS

ನವದೆಹಲಿ, ಸೆ.12-ಯೆಮೆನ್‍ನಲ್ಲಿ ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅಪಹೃತರಾಗಿದ್ದ ಕೇರಳದ ಪಾದ್ರಿ ಫಾದರ್ ಟಾಮ್ ಉಳುನ್‍ನಲಿಲ್ ಅವರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅಪಹೃತ ಪಾದ್ರಿಯನ್ನು ಒಮನ್ ದೇಶದ ನೆರವಿನಿಂದ ರಕ್ಷಿಸಲಾಗಿದೆ. ಅವರನ್ನು ಮಸ್ಕಾಟ್‍ಗೆ ಸ್ಥಳಾಂತರಿಸಲಾಗಿದ್ದು, ಇಂದು ರಾತ್ರಿ ಅಥವಾ ನಾಳೆ ತಾಯ್ನಾಡಿಗೆ ಹಿಂದಿರುಗಿ ಕೇರಳ ತಲುಪಲಿದ್ದಾರೆ.
ಪಾದ್ರಿ ಸುರಕ್ಷಿತವಾಗಿ ಬಿಡುಗಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸುಷ್ಮಾ ರಾಜತಾಂತ್ರಿಕ ನೆರವಿನಿಂದ ಟಾಮ್‍ನನ್ನು ರಕ್ಷಿಸಲಾಗಿದೆ ಎಂದು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin