ಕಿರು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

child-boy--hanging

ಚಿಕ್ಕಮಗಳೂರು,ಸೆ.12- ಕಿರು ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೊಂದು 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.ಸುಮೀತ್ (15) ಮೃತಪಟ್ಟ ಬಾಲಕ.  ಈತ ನಗರದ ಸಂತ ಜೋಸೆಫ್ ಫ್ರೌಡಶಾಲೆಯಲ್ಲಿ 9ನೆ ತರಗತಿ ಓದುತ್ತಿದ್ದನು. ಇತ್ತೀಚೆಗಷ್ಟೆ ಶಾಲೆಯಲ್ಲಿ ನಡೆದ ಕಿರು ಪರೀಕ್ಷೆಯಲ್ಲಿ (ಟೆಸ್ಟ್) ಎಲ್ಲಾ ವಿಷಯಗಳಲ್ಲೂ ಫೇಲಾಗಿದ್ದ. ಈ ಬಗ್ಗೆ ಸುಮೀತ್ ಸೆ.7ರಂದು ತನ್ನ ಪೋಷಕರ ಜೊತೆ ಮಾತನಾಡಿ, ನನಗೆ ವಿದ್ಯೆ ತಲೆಗೆ ಹೋಗುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತಿದೆ ಎಂದು ಹೇಳಿದ್ದಾನೆ. ಗಾಬರಿಯಾದ ಪೋಷಕರು ಮಗನಿಗೆ ಬುದ್ದಿ ಹೇಳಿ ಇಂತಹ ದುಸ್ಸಾಹಾಸಕ್ಕೆ ಕೈ ಹಾಕಬೇಡ, ಏನೂ ಆಗಲ್ಲ ಎಂದು ಧೈರ್ಯ ತುಂಬಿದ್ದರು.

ಆದರೂ ಮನೆಯ ಮೊದಲ ಮಹಡಿಯಲ್ಲಿರುವ ರೂಮ್‍ನಲ್ಲಿ ಬುಕ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಬೆಲ್ಟ್‍ನಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಪೋಷಕರು ಗಾಬರಿಯಿಂದ ರೂಮ್‍ನತ್ತ ಓಡಿದ್ದಾರೆ. ಇದೇ ವೇಳೆ ವಿಲವಿಲನೆ ಒದ್ದಾಡುತ್ತಿದ್ದ ಸುಮಿತ್‍ನನ್ನು ನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ.ಈ ಬಗ್ಗೆ ಸುಮೀತ್ ಪೋಷಕರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin