ಕುರಿ ಮಾಂಸ ಜಾಹೀರಾತಿನಲ್ಲಿ ಗಣಪತಿ : ಭಾರತೀಯರ ತೀವ್ರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Meat--01-Ganesha

ಸಿಡ್ನಿ, ಸೆ.12-ಕುರಿ ಮಾಂಸ ಸೇವಿಸುವಂತೆ ವಿಘ್ನ ನಿವಾರಕ ಗಣೇಶ ಸೇರಿದಂತೆ ಇತರ ಧರ್ಮಗಳ ಪುಣ್ಯಪುರುಷರು ಕರೆ ನೀಡುವ ಆಸ್ಟ್ರೇಲಿಯಾದ ಟೆಲಿವಿಷನ್ ಜಾಹೀರಾತು ವಿರುದ್ಧ ಭಾರತೀಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮೀಟ್ ಅಂಡ್ ಲೈವ್‍ಸ್ಟಾಕ್ ಆಸ್ಟ್ರೇಲಿಯ ಎಂಬ ಕಂಪನಿಯ ಟಿವಿ ಜಾಹೀರಾತಿನಲ್ಲಿ ಗಣಪತಿ, ಯೇಸುಕ್ರಿಸ್ತ, ಬುದ್ಧ ಮೊದಲಾದವರು ಕುರಿ ಮಾಂಸ ಭಕ್ಷಿಸುತ್ತಿರುವ ದೃಶ್ಯಗಳಿವೆ. ಗಣಪತಿ ಸಸ್ಯಾಹಾರಿಯಾಗಿದ್ದು, ಮಾಂಸಾಹಾರಿ ಎಂಬಂತೆ ಬಿಂಬಿಸಲಾಗಿರುವ ಈ ಜಾಹೀರಾತು ಮತ್ತು ಕಂಪನಿಯ ವಿರುದ್ಧ ಅಲ್ಲಿನ ಭಾರತೀಯರು ಅಸಮಾಧಾನಗೊಂಡಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರದ ಗಮನಕ್ಕೆ ಈ ವಿಷಯ ತರಲಾಗಿದೆ. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳು ಇದರಲ್ಲಿವೆ ಎಂದು ತಿಳಿಸಲಾಗಿದೆ ಎಂದು ಕ್ಯಾನ್‍ಬೆರಾದಲ್ಲಿರುವ ಭಾರತೀಯ ಹೈ ಕಮಿಷನರ್ ಕಚೇರಿ ತಿಳಿಸಿದೆ.

 

Facebook Comments

Sri Raghav

Admin