ನಾನೂ ಗೌರಿ. ನಾವೆಲ್ಲರೂ ಗೌರಿ : ಪ್ರತಿರೋಧ ಸಮಾವೇಶಕ್ಕೆ ಹರಿದು ಬಂತು ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--01

ಬೆಂಗಳೂರು, ಸೆ.12-ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿಂದು ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು, ಪತ್ರಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು.
ಗೌರಿ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಈ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ಕೋಮುಸೌಹಾರ್ದ ವೇದಿಕೆ, ಜನಶಕ್ತಿ ಕೇಂದ್ರ, ಎಸ್‍ಡಿಪಿಐ, ಡಿಎಸ್‍ಎಸ್ ಸಂಘಟನೆ, ಮಹಿಳಾ ಸಂಘಟನೆ, ಕಮ್ಯುನಿಷ್ಟ್ ಪಕ್ಷ, ಪ್ರಾಂತ ರೈತ ಸಂಘ ಸೇರಿದಂತೆ ನೂರಾರು ಸಂಘಟನೆಗಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಗೌರಿ ಹತ್ಯೆ ಘಟನೆಯನ್ನು ಖಂಡಿಸಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೂ ಬೃಹತ್ ರ್ಯಾಲಿ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಆಗ್ರಹಿಸಿದರು.

Gauri-Lankesh--02

ನಾನು ಗೌರಿ, ನಾವೆಲ್ಲರೂ ಗೌರಿ ಎಂಬ ಭಿತ್ತಿಪತ್ರಗಳನ್ನು ಹಿಡಿದು ತಲೆಗೆ ಕಪ್ಪು ಬಟ್ಟೆ ಕಟ್ಟಿದ್ದ ಪ್ರತಿಭಟನಾಕಾರರು ಕಪ್ಪು ಛತ್ರಿಗಳನ್ನು ಹಿಡಿದು ಗೌರಿ ಪರವಾದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ವಿವಿಧ ಸಾಂಸ್ಕøತಿಕ ತಂಡಗಳು, ಜಾನಪದ ತಂಡಗಳೊಂದಿಗೆ, ಭಜನೆ, ಗೌರಿ ಪರವಾದ ಗೀತರೂಪಕಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗಿ ಪತ್ರಕರ್ತೆ ಹತ್ಯೆಯನ್ನು ಖಂಡಿಸಿದರು.

ಗೌರಿ ಹತ್ಯೆಯನ್ನು ಸಂಘ ಪರಿವಾರದವರು ಮಾಡಿದ್ದಾರೆ ಎಂದು ಆರೋಪಿಸಿದ್ದಕ್ಕೆ ನೋಟಿಸ್ ನೀಡಲಾಗಿದೆ. ಎಷ್ಟು ನೋಟಿಸ್‍ಗಳನ್ನು ಇವರು ನೀಡುತ್ತಾರೆ. 120 ಕೋಟಿ ನೋಟೀಸ್ ರೆಡಿ ಮಾಡಿಕೊಳ್ಳಲಿ. ಎಲ್ಲಾ ನೋಟಿಸ್‍ಗೂ ಕಾನೂನು ಪ್ರಕಾರವೇ ಉತ್ತರ ನೀಡುತ್ತೇವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿ.ಟಿ.ಲಲಿತಾನಾಯಕ್, ಕೆ.ನೀಲಾ ಮುಂತಾದ ಮುಖಂಡರು ಹೇಳಿದರು.

PUR_9489

ಬಿ.ಟಿ.ಲಲಿತಾನಾಯಕ್ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಕೆಲಸವಾಗಿದೆ. ಇದು ತೊಲಗಬೇಕು. ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆಡೆ ಇಂತಹ ಕೃತ್ಯಗಳು ನಡೆಯುತ್ತಿವೆ. ಇದನ್ನು ನಾವೆಲ್ಲರೂ ಖಂಡಿಸಲೇಬೇಕು. ಪ್ರಜಾಪ್ರಭುತ್ವ ವಿರೋಧಿ ಧೋರಣೆ ವಿರುದ್ಧ ನಾವೆಲ್ಲ ಧ್ವನಿ ಎತ್ತದಿದ್ದರೆ ಸರ್ವಾಧಿಕಾರಿ ಧೋರಣೆ ತಲೆ ಎತ್ತುತ್ತದೆ ಎಂದು ಎಚ್ಚರಿಸಿದರು.
ಒಂದು ವಾರದೊಳಗೆ ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂಬ ಎಚ್ಚರಿಕೆ ನೀಡಿದರು.
ಬೀದರ್‍ನಿಂದ ಕೋಲಾರದವರೆಗೆ, ಬಳ್ಳಾರಿಯಿಂದ ಚಾಮರಾಜನಗರದವರೆಗ ಎಲ್ಲಾ ಪ್ರಗತಿಪರರು, ಸಾಹಿತಿಗಳು, ಬರಹಗಾರರು, ಪತ್ರಕರ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

IMG_9576

ರ್ಯಾಲಿ ನಂತರ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಹಾರಾಷ್ಟ್ರದಲ್ಲಿ ಹತ್ಯೆಯಾದ ಪನ್ಸಾರೆ ಅವರ ಪುತ್ರಿ ಮೇಘನಾ ಪನ್ಸಾರೆ, ಖ್ಯಾತ ಪತ್ರಕರ್ತ ಪಿ.ಸಾಯಿನಾಥ್, ಸಿಪಿಎಂ ಮುಖಂಡ ಸೀತಾರಾಮ್ ಯಚೂರಿ, ಬಾಲಿವುಡ್ ನಿರ್ಮಾಪಕ ಆನಂದ್ ಪಟೂರಿ, ಪತ್ರಕರ್ತೆ ಸಿಸ್ತಾ ಸೆಟಲ್‍ವಾಡ್, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್, ಖ್ಯಾತ ವಕೀಲ ಪ್ರಶಾಂತ್‍ಭೂಷಣ್, ಗುಜರಾತ್‍ನ ದಲಿತ ಹೋರಾಟಗಾರ ಜಿಜ್ಞಾಶ್ ಮೇವಾನಿ, ಚಿತ್ರನಟ ಪ್ರಕಾಶ್‍ರೈ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಿರೀಶ್ ಕಾಸರವಳ್ಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‍ಮಟ್ಟು, ನಾಗತಿಹಳ್ಳಿ ಚಂದ್ರಶೇಖರ್, ಸಿದ್ದನಗೌಡ ಪಾಟೀಲ್, ಮಾರುತಿ ಮಾನ್ಪಡೆ, ಸಾಹಿತಿ ಮರುಳಸಿದ್ಧಪ್ಪ, ಕೆ.ಶಿವರಾಮ್, ಕೆ.ಎಸ್.ವಿಮಲಾ, ಎಸ್.ಆರ್.ಹಿರೇಮಠ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

IMG_9567

ಗೌರಿ ಲಂಕೇಶ್ ಕುರಿತು 12 ಗೀತ ರೂಪಕಗಳನ್ನು ರಚಿಸಲಾಗಿದೆ. ರ್ಯಾಲಿಯುದ್ದಕ್ಕೂ ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ತಮ್ಮ ಹಾಡು, ಕುಣಿತ ಮೂಲಕ ಗೌರಿ ಸಾವಿಗೆ ನ್ಯಾಯ ಕೇಳುತ್ತಿದ್ದರು.

Facebook Comments

Sri Raghav

Admin