ಬಳ್ಳಾರಿ ವಿಮ್ಸ್ ಆಸ್ಪತ್ರೆ ಮೇಲ್ಛಾವಣಿ ಕುಸಿತ : ಕೆಲಕಾಲ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Vims-Bellary--01

ಬಳ್ಳಾರಿ ಸೆ.12- ನಗರದ ವಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮೇಲ್ಛಾವಣಿ ಪದರ ಕುಸಿದು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಮೇಲ್ಛಾವಣಿ ಕುಸಿದ ಶಸ್ತ್ರ ಚಿಕಿತ್ಸೆ ವಿಭಾಗದ ಕೊಠಡಿಯೊಳಗೆ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ಹಳೇ ಕಟ್ಟಡವಾಗಿರುವುದರಿಂದ ಮತ್ತೆ ಯಾವುದೇ ಸಮಯದಲ್ಲಿ ಕುಸಿದು ಬೀಳುವ ಅಪಾಯವಿರುವುದರಿಂದ ಮೇಲ್ಛಾವಣಿ ಕುಸಿದ ಕೊಠಡಿಯನ್ನು ಮುಚ್ಚಲಾಗಿದೆ.
ಕಳೆದ ವರ್ಷವೂ ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕಟ್ಟಡ ಕುಸಿದು ಅನಾಹುತ ಸಂಭವಿಸಿತ್ತು. ಹಾಗಾಗಿ ವಿಮ್ಸ್ ಆಸ್ಪತ್ರೆಯ ಕಟ್ಟಡವನ್ನು ದುರಸ್ತಿಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದರು.

Facebook Comments

Sri Raghav

Admin