ಬ್ರಿಟಿಷ್ ಸಂಸತ್ತಿನಲ್ಲಿ ಬ್ರೆಕ್ಸಿಟ್ ಮಸೂದೆ ಪರ ಮತ

ಈ ಸುದ್ದಿಯನ್ನು ಶೇರ್ ಮಾಡಿ

British-P

ಲಂಡನ್, ಸೆ.12-ಐರೋಪ್ಯ ಸಮುದಾಯದಿಂದ ಹೊರಬರುವ ಬ್ರಿಟನ್ ಸರ್ಕಾರದ ಮಹತ್ವದ ಹೆಜ್ಜೆಯಾದ ಬ್ರೆಕ್ಸಿಟ್ (ಬ್ರಿಟನ್-ಎಕ್ಸಿಟ್) ಮಸೂದೆ ಪರವಾಗಿ ಸಂಸದರು ಸಂಸತ್ತಿನಲ್ಲಿ ಮತ ಚಲಾಯಿಸಿದ್ದಾರೆ. ಅಧಿಕಾರ ಪ್ರಾಬಲ್ಯಕ್ಕಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಪ್ರತಿಪಕ್ಷಗಳ ಆರೋಪ ಮತ್ತು ಪ್ರತಿರೋಧದ ನಡುವೆಯೂ ಮಸೂದೆ ಪರವಾಗಿ ಮತಗಳು ಚಲಾವಣೆಯಾಗಿವೆ.

ಬಿಟ್ರನ್ ಸಂಸತ್ತಿನಲ್ಲಿ ಈ ವಿಷಯ ಕುರಿತು ನಡೆದ 13 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಸಂಸದರು 290/326 ಮತಗಳ ಬೆಂಬಲ ನೀಡಿದ್ದಾರೆ. ಈ ಮಸೂದೆ ಮುಂದಿನ ಪರಿಶೀಲನೆಗಾಗಿ ರವಾನೆಯಾಗಿದೆ.  ಯುರೋಪ್ ಸಮುದಾಯದ ಸದಸ್ಯತ್ವದಿಂದ ಹೊರ ಬರುವ ಬ್ರಿಟನ್ ಪ್ರಸ್ತಾವನೆ ಕುರಿತು ಕೆಲವು ವರ್ಷಗಳಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದರು. ಈ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿತ್ತು. ಅದರಲ್ಲೂ ಸಹ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.

Facebook Comments

Sri Raghav

Admin