ಭ್ರೂಣ ಹತ್ಯೆ, ಲಿಂಗ ಪತ್ತೆ ಮಾಹಿತಿ ಇದ್ದರೆ 104ಗೆ ಕರೆ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

Mysueruururrs

ಮೈಸೂರು,ಸೆ.12- ನರ್ಸಿಂಗ್ ಹೋಂ, ಕ್ಲಿನಿಕ್ ಹಾಗೂ ಆಸ್ಪತ್ರೆಗಳಲ್ಲಿ ಅಕ್ರಮವಾಗಿ ಭ್ರೂಣ ಹತ್ಯೆ ಹಾಗೂ ಲಿಂಗ ಪತ್ತೆ ಮಾಡುತ್ತಿರುವ ಮಾಹಿತಿ ಇದ್ದರೆ 104ಗೆ ಕರೆ ಮಾಡಿ ದೂರು ನೀಡಲು ಜಿಲ್ಲಾಧಿಕಾರಿ ರಂದೀಪ್ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರಗಳ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆ ಮಾಡುವುದನ್ನು ಸಾರ್ವಜನಿಕರು 104ಗೆ ಕರೆ ಮಾಡಿ ತಿಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಇದು ಟೋಲ್ ಫ್ರಿ ದೂರವಾಣಿ ವ್ಯವಸ್ಥೆಯಾಗಿದ್ದು, ರಾತ್ರಿ ವೇಳೆಯೂ ಸಹ ದೂರವಾಣಿ ಸ್ವೀಕರಿಸುವಂತೆ ಸೂಚಿಸಲಾಗಿದೆ. ಅಕ್ರಮವಾಗಿ ಕಾನೂನು ವಿರುದ್ಧ ಕೆಲಸ ನಡೆಯುತ್ತಿರುವುದು ತಿಳಿದುಬಂದರೆ ಕೂಡಲೇ ಮಾಹಿತಿ ನೀಡಬೇಕು. ಯಾವುದೇ ಆಸ್ಪತ್ರೆಯಾಗಿರಲಿ, ಕ್ಲಿನಿಕ್ ಆಗಿರಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಎಚ್ಚರಿಕೆ ಮತ್ತು ಸಾರ್ವಜನಿಕರು ದೂರು ನೀಡಲು ಸಹಾಯವಾಣಿ ಸಂಖ್ಯೆ ಇರುವ ಫಲಕಗಳನ್ನು ಎಲ್ಲಾ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Facebook Comments

Sri Raghav

Admin