‘ಲಂಚ ಬಿಡಬೇಡಿ, ಮಿತವಾಗಿ ತೆಗೆದುಕೊಳ್ಳಿ’ : ಹೀಗೆ ಹೇಳಿದ ಈ ಮಹಾನುಭಾವ ಯಾರು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Keshav

ಲಕ್ನೋ, ಸೆ.12-ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆಯೊಂದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಂಚ ಪಡೆಯಿರಿ, ಆದರೆ ಅದು ನಿಮ್ಮ ಆಹಾರದಲ್ಲಿರುವ ಉಪ್ಪಿನ ಪ್ರಮಾಣದಷ್ಟು ಇರಲಿ. ಮಿತವಾಗಿ ಲಂಚ ತೆಗೆದುಕೊಳ್ಳಿ ಎಂದು ಹೇಳಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಅವರ ಸಹಾಯಕರು ಈ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಗುತ್ತಿಗೆದಾರರು ಹಣ ಮಾಡಬಾರದು ಎಂದು ಯಾರೊಬ್ಬರೂ ಹೇಳಲಾರರು. ನಾವು ಭಷ್ಟ್ರಾಚಾರಮುಕ್ತ ವ್ಯವಸ್ಥೆಯನ್ನು ಬಯಸುತ್ತೇವೆ. ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳು ಮತ್ತು ಕಂಟ್ರಾಕ್ಟರ್‍ಗಳು ಹಣ ಲೂಟಿ ಮಾಡಬಾರದು. ಹಣ ಮಾಡಿ, ಆದರೆ ಅದು ಹೇಗಿರಬೇಕೆಂದರೆ ದಾಲ್ ಸಂಬಾರ್‍ನಲ್ಲಿರುವ ಉಪ್ಪಿನಂತಿರಬೇಕು. ಆದರೆ ನೀವು ಜನರ ಹಣವನ್ನು ಲೂಟಿ ಮಾಡಲು ಮುಂದಾದರೆ ಬಿಜೆಪಿ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಲೋಕೋಪಯೋಗಿ ಉಸ್ತುವಾರಿ ಸಚಿವರೂ ಆಗಿರುವ ಮೌರ್ಯ ಎಚ್ಚರಿಕೆ ನೀಡಿದರು.

Facebook Comments

Sri Raghav

Admin