ಸೆ.20 ರಿಂದ ಮೈಸೂರು- ಚೆನ್ನೈ ನಡುವೆ ವಿಮಾನ ಹಾರಾಟ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Pratap

ಮೈಸೂರು, ಸೆ.12- ಮೈಸೂರು ಮತ್ತು ಚೆನ್ನೈ ನಡುವೆ ಸೆ.20 ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದ ಮಂಡಕ್ಕಳ್ಳಿ ವಿಮಾನ ನಿಲ್ದಾನದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರೂಜೆಟ್ ಏರ್‍ಲೈನ್ ಸಂಸ್ಥೆಯವರು 72 ಆಸನಗಳುಳ್ಳ ವಿಮಾನ ಹಾರಾಟ ಆರಂಭಿಸಲಿದ್ದು, ಸೆ.20 ರಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್‍ಸಿನ್ಹಾ ಅವರು ಮರುವಿಮಾನ ಹಾರಾಟಕ್ಕೆ ಚಾಲನೆ ನೀಡಲಿದ್ದಾರೆ.

ವಾರದ ಏಳು ದಿನಗಳು ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ನಡೆಯಲಿದ್ದು, ಸಂಜೆ 5.25ರಿಂದ ಚೆನ್ನೈನಿಂದ ವಿಮಾನ ಹಾರಾಟ ಆರಂಭಿಸಿ 6.40ಕ್ಕೆ ಮೈಸೂರಿಗೆ ಆಗಮಿಸಲಿದೆ. ನಂತರ ಸಂಜೆ 7.05ಕ್ಕೆ ಮತ್ತೆ ಪ್ರಯಾಣ ಆರಂಭಿಸಿ ರಾತ್ರಿ 8.40ಕ್ಕೆ ಚೆನ್ನೈ ತಲುಪಲಿದೆ. ಅದೇ ವಿಮಾನ 25 ನಿಮಿಷಗಳ ನಂತರ ಹೈದರಾಬಾದ್‍ಗೆ ತೆರಳಲಿದೆ ಎಂದು ತಿಳಿಸಿದರು.

ಮೈಸೂರಿನಿಂದ ಹೈದರಾಬಾದ್‍ಗೆ ತೆರಳುವ ಪ್ರಯಾಣಿಕರು ನೇರವಾಗಿ ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದು ಎಂದು ಮಾಹಿತಿ ನೀಡಿದರು.
ಗರಿಷ್ಠ 2,500ರೂ.ಪ್ರಯಾಣದರ ಮೀರಬಾರದು ಎಂದು ವಿಮಾನ ಸಂಸ್ಥೆಯವರಿಗೆ ತಿಳಿಸಲಾಗಿದೆ. ಉದ್ಘಾಟನೆ ಟ್ರಿಪ್‍ನಲ್ಲಿ 999 ರೂ. ರಿಯಾಯ್ತಿ ನೀಡಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin