ಪರೀಕ್ಷೆ ವೇಳೆ ಸ್ಪೋಟಗೊಂಡ ಅಮೆರಿಕದಿಂದ ಖರೀದಿಸಿದ್ದ ಹೋವಿಟ್ಜರ್ ಫಿರಂಗಿ

ಈ ಸುದ್ದಿಯನ್ನು ಶೇರ್ ಮಾಡಿ

America--01

ನವದೆಹಲಿ, ಸೆ.13-ರಾಜಸ್ತಾನದ ಪ್ರೊಖ್ರಾನ್‍ನ ಫೈರಿಂಗ್ ರೇಂಜ್‍ನಲ್ಲಿ ಪರೀಕ್ಷೆ ನಡೆಸಿದ ವೇಳೆ ಭಾರತೀಯ ಸೇನೆಗೆ ಹೊಸದಾಗಿ ಖರೀದಿಸಿರುವ ದೂರವ್ಯಾಪ್ತಿಯ ಲಘು ಎಂ-777 ಹೋವಿಟ್ಜರ್ ಫಿರಂಗಿ ಸ್ಫೋಟಗೊಂಡಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸೆ.2ರಂದು ಈ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ಹೇಳಿವೆ. ಭಾರತದಲ್ಲಿ ತಯಾರಾದ ಮದ್ದುಗುಂಡುಗಳನ್ನು ಹಾರಿಸುತ್ತಿದ್ದಾಗ ಅಮೆರಿಕ ನಿರ್ಮಿತ ಫಿರಂಗಿಯ ನಳಿಕೆ ಸ್ಫೋಟಗೊಂಡಿದೆ. ಬಹುಕೋಟಿ ರೂ.ಗಳ ಬೋಫೋರ್ಸ್ ಹಗರಣ ಸ್ಫೋಟಗೊಂಡ ಬಳಿಕ ಭಾರತ ಈ ವರ್ಷ ಮೇ ತಿಂಗಳಿನಲ್ಲಿ 35 ಕೋಟಿ ರೂ. ಮೌಲ್ಯದ ಎರಡು ಹೋವಿಟ್ಜರ್ ಫಿರಂಗಿಗಳನ್ನು ಖರೀದಿಸಿತ್ತು. ಈಗ ಒಂದು ಫಿರಂಗಿ ಸ್ಫೋಟಿಸಿದೆ.

Facebook Comments

Sri Raghav

Admin