ಬೆಂಗಳೂರಿನ 13 ವಿಧಾನಸಭಾ ಕ್ಷೇತ್ರಗಳಿಗಾಗಿ ಗೌಡರ ಕಾರ್ಯತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Devegowda--01-JDS

ಬೆಂಗಳೂರು, ಸೆ.13- ಬೆಂಗಳೂರು ಮಹಾನಗರದ 13 ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ತೀವ್ರ ಪೈಪೋಟಿ ಇಲ್ಲದ ಹಾಗೂ ಆಯಾ ವಿಧಾನಸಭಾ ಕ್ಷೇತ್ರದ ಮುಖಂಡರ ಮತ್ತು ಕಾರ್ಯಕರ್ತರಿಗೆ ಬಹುಮತ ಮೂಡಿರುವ ಆಕಾಂಕ್ಷಿಗಳನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ನಾರಾಯಣಸ್ವಾಮಿ, ದಾಸರಹಳ್ಳಿ- ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಮಹಾಲಕ್ಷ್ಮಿಲೇಔಟ್-ಶಾಸಕ ಗೋಪಾಲಯ್ಯ, ರಾಜಾಜಿನಗರ-ಎಸ್.ಪಿ.ಆನಂದ್, ಪದ್ಮನಾಭನಗರ-ಗೋಪಾಲ್, ಹೆಬ್ಬಾಳ-ಹನುಮಂತೇಗೌಡ, ಬ್ಯಾಟರಾಯಪುರ-ಟಿ.ಎನ್.ಚಂದ್ರು, ಮಹದೇವಪುರ-ಸತೀಶ್, ಯಶವಂತಪುರ-ಜವರಾಯಗೌಡ, ಯಲಹಂಕ-ಕೃಷ್ಣಪ್ಪ, ಜಯನಗರ-ರವಿಕುಮಾರ್, ಬಿ.ಟಿ.ಎಂ.ಲೇಔಟ್-ದೇವರಾಜ್, ಆರ್‍ಆರ್‍ನಗರ ವಿಧಾನಸಭಾ ಕ್ಷೇತ್ರಕ್ಕೆ ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಅವರ ಹೆಸರು ಮುಂಚೂಣಿಯಲ್ಲಿದೆ.
ಈ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ವರಿಷ್ಠರು ಶ್ರೀಘ್ರದಲ್ಲೇ ಪ್ರಕಟಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin