ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ : ಬಿಎಸ್ವೈಗೆ ಸಿದ್ದು ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Siddaramaiah-

ಬೆಂಗಳೂರು, ಸೆ.13- ನಮ್ಮ ಸರ್ಕಾರ ಇಲ್ಲವೆ ನನ್ನ ಕುಟುಂಬದವರು ಭ್ರಷ್ಟಾಚಾರ ನಡೆಸಿರುವ ದಾಖಲೆಗಳಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಲಿ. ಹಾದಿಬೀದಿಯಲ್ಲಿ ಈ ಬಗ್ಗೆ ಕೊಚ್ಚಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ವಿಧಾನಸೌಧ ಮುಂಭಾಗ ಅತಿ ಉದ್ದದ ನೂತನ ಐರಾವತ ಡೈಮಂಡ್ ಬಸ್‍ಗಳಿಗೆ ಹಸಿರು ನಿಶಾನೆ ತೋರಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಕುಟುಂಬ ಇಲ್ಲವೆ, ನಮ್ಮ ಸರ್ಕಾರದ ಸಚಿವರು, ಶಾಸಕರು ಸೇರಿದಂತೆ ಯಾರೇ ಆಗಲಿ ಭ್ರಷ್ಟಾಚಾರ ನಡೆಸಿರುವುದರ ಬಗ್ಗೆ ದಾಖಲೆಗಳಿದ್ದರೆ ಯಡಿಯೂರಪ್ಪ ಈವರೆಗೂ ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು.

Facebook Comments

Sri Raghav

Admin