ರಸ್ತೆಗಿಳಿದ ಆಧುನಿಕ ಐರಾವತ ಡೈಮಂಡ್ ಬಸ್ಸುಗಳು, ಸ್ಪೆಷಾಲಿಟಿಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

KSRTC01

ಬೆಂಗಳೂರು, ಸೆ.13- ದೇಶದಲ್ಲೇ ಅತಿ ಉದ್ದನೆಯ ಐರಾವತ ಡೈಮಂಡ್ ಕ್ಲಾಸ್ ಬಸ್‍ಗಳಿಗೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಇಂದು ವಿಧಾನಸೌಧದ ಮುಂಭಾಗ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಒಟ್ಟು 23 ವೋಲ್ವೋ ಮಲ್ಟಿಆ್ಯಕ್ಸಲ್ ಬಸ್‍ಗಳಿಗೆ ಹಸಿರು ನಿಶಾನೆ ತೋರಿದರು. ದೇಶದಲ್ಲೇ ಅತ್ಯಂತ ಉದ್ದನೆಯ ವೋಲ್ವೋ ಮಲ್ಟಿಆ್ಯಕ್ಸಲ್ ಬಸ್‍ಗಳು ಇವಾಗಿದ್ದು, 51ಸೀಟುಗಳನ್ನು ಹೊಂದಿವೆ. ಒಂದು ಬಸ್‍ಗೆ ಸುಮಾರು 1.07ಕೋಟಿ ವೆಚ್ಚವಾಗಿದ್ದು, ಮೂರು ಟಿವಿ, ಎಸಿ, ಪ್ರತೀ ಸೀಟುಗಳಿಗೆ ಚಾರ್ಜಿಂಗ್ ಸೌಲಭ್ಯ, ಆಟೋಗೇರ್ ಟ್ರಾನ್‍ಮಿಷನ್, 410 ಹಾರ್ಸ್‍ಪವರ್ ಎಂಜಿನ್ ಮತ್ತು 14.5ಮೀಟರ್ ಉದ್ದವನ್ನು ಹೊಂದಿದೆ.

MCS_3564

ಪ್ರಾರಂಭಿಕ ಹಂತದಲ್ಲಿ ಈ ಬಸ್‍ಗಳು ವಿರಾಜಪೇಟೆ-ಬೆಂಗಳೂರು, ಮಡಿಕೇರಿ-ಬೆಂಗಳೂರು, ಮೈಸೂರು-ಬೆಂಗಳೂರು, ಬೆಂಗಳೂರು -ಕ್ಯಾಲಿಕಟ್, ಬೆಂಗಳೂರು-ಚನ್ನೈ, ಬೆಂಗಳೂರು- ವಿಜಯವಾಡ, ಬೆಂಗಳೂರು- ಶ್ರೀಹರಿಕೋಟ ಮತ್ತು ಮಂಗಳೂರು-ಮುಂಬೈ ನಡುವೆ ಸಂಚರಿಸಲಿವೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ದೇಶದಲ್ಲೇ ಅತ್ಯಂತ ಉದ್ದನೆಯ ವೋಲ್ವೋ ಮಲ್ಟಿಆ್ಯಕ್ಸಲ್ ಬಸ್‍ಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

MGP_5608

ಪ್ರಯಾಣಿಕರಿಗೆ ಅತ್ಯುತ್ತಮ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಬಸ್‍ಗಳು ಪ್ರಾರಂಭಿಕವಾಗಿ 8ಕಡೆ ಮಾತ್ರ ಸಂಚರಿಸಲಿವೆ. ಸುಮಾರು 1.7ಕೋಟಿ ರೂ. ವೆಚ್ಚದಲ್ಲಿ 23 ಬಸ್‍ಗಳನ್ನು ಖರೀದಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದರೆ ಮತ್ತಷ್ಟು ಬಸ್‍ಗಳನ್ನು ಖರೀದಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

IMG-20170913-WA0073

 

MCS_3573

IMG-20170913-WA0083

Facebook Comments

Sri Raghav

Admin