ಉತ್ತರಪ್ರದೇಶದಲ್ಲಿ ಯಮುನಾ ನದಿಯಲ್ಲಿ ದೋಣಿ ಮುಳುಗಿ 22 ಮಂದಿ ಜಲ ಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Uttar-Pradesh--01

ಲಕ್ನೊ, ಸೆ.14-ದೋಣಿಯೊಂದು ಮುಳುಗಿ 22 ಮಂದಿ ಜಲ ಸಮಾಧಿಯಾದ ಘೋರ ದುರಂತ ಇಂದು ಮುಂಜಾನೆ ಉತ್ತರಪ್ರದೇಶದ ಬಾಗ್‍ಪರ್ ಜಿಲ್ಲೆಯ ಯಮುನಾ ನದಿಯಲ್ಲಿ ಸಂಭವಿಸಿದೆ. ಇನ್ನು ಅನೇಕರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಸುಮಾರು 60 ಜನರಿದ್ದ ದೋಣಿ ಇಂದು ಮುಂಜಾನೆ ಯಮುನಾ ನದಿಯಲ್ಲಿ ಮುಳುಗಿ ಈ ದುರಂತ ಸಂಭವಿಸಿತು. 22 ಮಂದಿ ನೀರುಪಾಲಾಗಿದ್ದು, 12 ಜನರನ್ನು ರಕ್ಷಿಸಲಾಗಿದೆ.

ಈವರೆಗೆ 22 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಭವಾನಿ ಸಿಂಗ್ ತಿಳಿಸಿದ್ದಾರೆ. ಮುಳುಗಿರುವ ಇತರ ಪ್ರಯಾಣಿಕರಿಗಾಗಿ ರಕ್ಷಣಾ ತಂಡಗಳು ಮತ್ತು ನುರಿತ ಈಜುಗಾರರು ಸಮರೋಪಾದಿಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಳುಗು ತಜ್ಞರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮತ್ತಷ್ಟು ಶವಗಳು ಪತ್ತೆಯಾಗುವ ಸಾಧ್ಯತೆ ಇದೆ.

Facebook Comments

Sri Raghav

Admin