ಕಲ್ಯಾಣ್ ಮೋಟಾರ್ಸ್‍ನ ಶಾಖಾ ಕಚೇರಿಗಳ ಮೇಲೆ ಐಟಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Kalyani-Motors

ಬೆಂಗಳೂರು,ಸೆ.14-ಅಕ್ರಮ ವಹಿವಾಟು, ಹವಾಲ ದಂಧೆ, ಹಣಕಾಸು ದುರ್ಬಳಕೆ ಬಗ್ಗೆ ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಕಲ್ಯಾಣಿ ಮೋಟಾರ್ಸ್‍ನ ಚೆನ್ನೈ, ಹೈದರಾಬಾದ್, ಬೆಂಗಳೂರು ಶಾಖಾ ಕಚೇರಿಗಳ ಮೇಲೆ ಏಕಕಾಲಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ನಾಯಂಡಹಳ್ಳಿ, ಬನ್ನೇರುಘಟ್ಟಗಳಲ್ಲಿರುವ ಕಲ್ಯಾಣಿ ಮೋಟಾರ್ಸ್‍ನ ಶಾಖಾ ಕಚೇರಿಗಳ ಮೇಲೆ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ನಾಯಂಡಹಳ್ಳಿ ಶಾಖೆಯ ಮ್ಯಾನೇಜರ್ ಅವರನ್ನು ವಿಚಾರಣೆ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಬೆಳಗ್ಗೆಯಿಂದ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸಂಜೆ ತನಕ ದಾಖಲೆಗಳ ಪರಿಶೀಲಿಸಿ, ಕಂಪ್ಯೂಟರ್‍ನಲ್ಲಿರುವ ಕೆಲವು ಮುಖ್ಯವಾದ ಮಾಹಿತಿಗಳನ್ನು ಪಡೆದಿದ್ದಾರೆ.  ಈ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ, ಆಸ್ತಿಪಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈಗ ಉದ್ಯಮಿಗಳ ಮೇಲೆ ಐಟಿ ದಾಳಿ ಮುಂದುವರೆದಿದೆ.

Facebook Comments

Sri Raghav

Admin