ಗೌರಿ ಲಂಕೇಶ್‍ಗೆ ಮರಣೋತ್ತರ ಪೆರಿಯಾರ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--0141

ಬೆಂಗಳೂರು, ಸೆ.13-ಇ.ವಿ.ರಾಮಸ್ವಾಮಿ ನಾಯ್ಕರ್(ಪೆರಿಯಾರ್) ಅವರ 138ನೆ ಜಯಂತಿಯನ್ನು ಸೆ.17 ರಂದು ಬೆಳಿಗ್ಗೆ 11.30ಕ್ಕೆ ಗಾಂಧಿನಗರದಲ್ಲಿನ ಹೊಟೇಲ್ ಕಾನಿಷ್ಕದ ಬಾದಾಮಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಚಾರವಾದಿಗಳ ವೇದಿಕೆ ಕರ್ನಾಟಕ ವಿವೇಕದ ರಾಜ್ಯ ಸಂಚಾಲಕ ವೈ.ಮರಿಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ನೆ ಸಾಲಿನ ಪೆರಿಯಾರ್ ಜಯಂತಿಯನ್ನು ಅನಿವಾರ್ಯ ಕಾರಣಗಳಿಂದ ಆಚರಿಸಲಾಗಿರಲಿಲ್ಲ. ಆದರೆ ಈ ಬಾರಿ ಆಚರಿಸಲಾಗುತ್ತಿದ್ದು, 2016ನೆ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ನಾಡಿನ ಬಂಡಾಯ ಬರಹಗಾರರೆಂದೇ ಖ್ಯಾತರಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ನೀಡಲಾಗುವುದು ಹಾಗೂ 2017ನೆ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಮರಣೋತ್ತರವಾಗಿ ಗೌರಿಲಂಕೇಶ್ ಅವರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಇಬ್ಬರು ಮೇರು ವ್ಯಕ್ತಿಗಳೀಗೆ ನೀಡುತ್ತಿರುವ ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ 25 ಸಾವಿರ ನಗದನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟೇಶ್ ವಹಿಸುವರು. ವಿಚಾರವಾದಿ, ಚಿಂತಕರಾದ ಪ್ರೊ.ರವಿವರ್ಮಕುಮಾರ್, ಅಗ್ನಿಶ್ರೀಧರ್, ಬಿ.ಟಿ.ಲಲಿತಾನಾಯಕ್, ಹುಲಿಕಲ್ ನಟರಾಜ್ ಭಾಗವಹಿಸಲಿದ್ದಾರೆ. ನಿಡುಮಾಮಿಡಿ ಮಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲಸ್ವಾಮೀಜಿ ಹಾಗೂ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಸರ್ದಾರ್ ಅಹಮ್ಮದ್ ಖುರೇಶಿ, ಲೋಲಾಕ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin