ಜಪಾನ್(JA)+ಇಂಡಿಯಾ(I)=ಜೈ(JAI) : ಶಿಂಜೋ ಉಭಯ ದೇಶಗಳ ಸಂಬಂಧ ಬಣ್ಣಿಸಿದ್ದು ಹೀಗೆ

ಈ ಸುದ್ದಿಯನ್ನು ಶೇರ್ ಮಾಡಿ

Abe--01

ಅಹಮದಾಬಾದ್, ಸೆ.14- ಜಪಾನ್(JA) ಮತ್ತು ಇಂಡಿಯಾ(I) ಸೇರಿದರೆ ಜೈ(JAI)-ಹೀಗೆ ಉಭಯರಾಷ್ಟ್ರಗಳ ನಡುವಣ ಸಂಬಂಧವನ್ನು ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಿದ್ದು, ಉದಯರವಿ ನಾಡಿನ ಪ್ರಧಾನಮಂತ್ರಿ ಶಿಂಜೋ ಅಬೆ.   ಅಹಮದಾಬಾದ್-ಮುಂಬೈ ನಡುವೆ ಸಂಚರಿಸಲಿರುವ 1.1 ಲಕ್ಷ ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಮತ್ತು ಪ್ರಥಮ ಹೈ-ಸ್ಪೀಡ್ ಬುಲೆಟ್ ರೈಲ್ವೆ ಯೋಜನೆ ಕಾಮಗಾರಿಗೆ ಇಂದು ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿದ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಿದರು.

ಸಮಾರಂಭದ ಬಳಿಕ ನಮಸ್ಕಾರ್ ಎಂದು ಎಲ್ಲರನ್ನೂ ವಂದಿಸಿ ಮಾತನಾಡಿದ ಅಬೆ ಇಂಡೋ-ಜಪಾನ ಸಹಭಾಗಿತ್ವವು ವಿಶೇಷವಾದುದು, ಮಹತ್ವವಾದುದು ಮತ್ತು ಜಾಗತಿಕವಾದುದು ಎಂದು ಅವರು ಬಣ್ಣಿಸಿದರು. ಅಲ್ಲದೆ ಭಾರತವನ್ನು ಮತ್ತು ಮೋದಿ ಅವರನ್ನು ಬಹುವಾಗಿ ಪ್ರಶಂಸಿಸಿದರು. ನನಗೆ ಗುಜರಾತ್ ತುಂಬಾ ಇಷ್ಟವಾಗಿದೆ. ಕೆಲವು ವರ್ಷಗಳ ಬಳಿಕ ನಾನು ಮತ್ತೆ ಭಾರತಕ್ಕೆ ಬಂದಾಗ ಬುಲೆಟ್ ರೈಲಿನ ಕಿಟಕಿ ಮೂಲಕ ಇಲ್ಲಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತೇನೆ ಎಂದು ಅಬೆ ಹೇಳಿದರು.

Facebook Comments

Sri Raghav

Admin