ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಚೆನ್ನಣ್ಣನವರ್

ಈ ಸುದ್ದಿಯನ್ನು ಶೇರ್ ಮಾಡಿ

Kusti--01

ಮೈಸೂರು, ಸೆ.14-ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಕುಸ್ತಿ ಅಭ್ಯಾಸ ಮಾಡುತ್ತಿದ್ದೆವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ ಡಿ ಚೆನ್ನಣ್ಣನವರ್ ತಿಳಿಸಿದರು. ಮೈಸೂರು ದಸಾರ ಮಹೋತ್ಸವ ಅಂಗವಾಗಿ ನಗರದಲ್ಲಿ ನಡೆದ ನಾಡ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ತಮ್ಮನ್ನು ದುಷ್ಟ ಶಕ್ತಿಗಳಿಂದ ಮತ್ತು ದಂಡೆತ್ತಿ ಬರುವವರಿಂದ ರಕ್ಷಿಸಿಕೊಳ್ಳಲು ವ್ಯಾಯಾಮ ಮಾಡಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಕುಸ್ತಿ ಅಭ್ಯಾಸ ಮಾಡುತ್ತಿದ್ದರು. ಎರಡು ರೀತಿಯ ಮನೋರಂಜನೆ ಇತ್ತು. ಒಂದು ಗರಡಿ ಮನೆ, ಇನ್ನೊಂದು ದೇವಸ್ಥಾನ. ಆದರೆ ಈಗ ಅದ್ಯಾವುದೂ ಇಲ್ಲ ಎಂದರು.

ಕಸರತ್ತು ಮಾಡುವುದರಿಂದ ಮೈಕಟ್ಟು ಚೆನ್ನಾಗಿರುತ್ತದೆ ಹಾಗೂ ಆತ್ಮಸ್ಥೈರ್ಯ ಸಹ ಹೆಚ್ಚಾಗುತ್ತದೆ. ಈ ಹಿಂದೆ ಬಲಹೀನರನ್ನು ರಕ್ಷಿಸಲು ಕುಸ್ತಿ ಕಸರತ್ತು ಮಾಡಲಾಗಿತ್ತು ಎಂದು ಹೇಳಿದರು. ಕುಸ್ತಿಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ ಇಟ್ಟುಕೊಳ್ಳಬೇಕು. ಕ್ರೀಡೆ ಮತ್ತು ಕಲೆ ಈ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಹೆಸರು ಮಾಡಲು ಸಾಧ್ಯವಿದೆ. ಅಲ್ಪತೃಪ್ತರಾಗದೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಯುವಕರಿಗೆ ಸಲಹೆ ನೀಡಿದರು. ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಕರ್ನಾಟಕ ಕುಸ್ತಿ ಫೆಡರೆಷನ್ ಅಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ ಮಾತನಾಡಿದರು. ಇದೇ ವೇಳೆ ಕುಸ್ತಿ ಪಂದ್ಯಾವಳಿಗಳಲ್ಲಿ ಗೆದ್ದ ವಿವಿಧ ಪೈಲ್ವಾನರಿಗೆ ಪ್ರಶಸ್ತಿ ನೀಡಲಾಯಿತು.

Facebook Comments

Sri Raghav

Admin