ಬೈಕ್‍ಗೆ ಬಸ್ ಡಿಕ್ಕಿ ಹೊಡೆದು ಎಎಸ್‍ಐ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--012

ದಾವಣಗೆರೆ, ಸೆ.14-ಬೈಕ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಎಎಸ್‍ಐ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹರಿಹರ ಹೊರವಲಯದ ರಾಜನಹಳ್ಳಿ ಕ್ರಾಸ್ ಸಮೀಪ ನಿನ್ನೆ ಸಂಜೆ ನಡೆದಿದೆ. ಹರಿಹರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ್(26) ಸಾವನ್ನಪ್ಪಿದ ಎಎಸ್‍ಐ. ನಿನ್ನೆ ಸಂಜೆ ಹರಿಹರದಿಂದ ತಮ್ಮ ಗ್ರಾಮ ಹೊಸಹಳ್ಳಿಗೆ ಸಹೋದರ ಬಸವರಾಜ್ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದರು. ರಾಜನಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದಂತೆ ಶಿವಮೊಗ್ಗದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಎಎಸ್‍ಐ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಿಂಬದಿ ಕುಳಿತಿದ್ದ ಸಹೋದರ ಬಸವರಾಜ್ ತೀವ್ರ ಗಾಯಗೊಂಡು ನಗರದ ಯಶಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು , ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪೆÇಲೀಸ್ ಕಾನ್‍ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಇತ್ತೀಚೆಗೆ ಎಎಸ್‍ಐ ಆಗಿ ಬಡ್ತಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.

Facebook Comments

Sri Raghav

Admin