ಮದರಸಾಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ ಯೋಗಿ ಆದಿತ್ಯನಾಥ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಲಕ್ನೋ, ಸೆ.14- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು 46 ಮದರಸಾಗಳಿಗೆ ಸರ್ಕಾರದಿಂದ ಸಿಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 560 ಮದರಸಾಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿದೆ. ಇದರಲ್ಲಿ ಅಕ್ರಮ ಕಾರ್ಯನಿರ್ವಹಣೆ ವರದಿ ಆಧಾರದ ಮೇಲೆ 46 ಮದರಸಾಗಳ ಅನುದಾನವನ್ನು ಯೋಗಿ ಆದಿತ್ಯಾನಾಥ್ ನೇತೃತ್ವದ ಸರ್ಕಾರ ರದ್ದು ಮಾಡಿದೆ.
ಕಾನ್ಪುರ್, ಖುಷಿನಗರ, ಕನ್ನೌಜ್, ಅಜಂಘರ್, ಮಹಾರಾಜ್‍ಗಂಜ್, ಸಿದ್ಧಾರ್ಥ್ ನಗರ, ಮಹೋಬಾ, ಶ್ರಾವಸ್ತಿ, ಬನಾರಸ್, ಫೈಜಾಬಾದ್, ಘಜಿಪುರ್, ಜೌನ್ಪುರ್, ಬರಾಬಂಕಿ, ಸಂತ ಕೊಬಿರ್‍ನಗರ್ ಹಾಗೂ ಝಾನ್ಸಿ ಜಿಲ್ಲೆಗಳ 46 ಮದರಸಾಗಳಿಗೆ ಅನುದಾನ ಸ್ಥಗಿತಗೊಳಿಸಲಾಗಿದೆ.

ಇನ್ನು, ಮದರಸಾಗಳಿಗೆ ಅನುದಾನ ರದ್ದು ಮಾಡಿರುವ ಯುಪಿ ಸರ್ಕಾರದ ನಡೆ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಯಾವುದೇ ಧರ್ಮವನ್ನು ಬಿಜೆಪಿ ಗೌರವಿಸುವುದಿಲ್ಲ. ಕಾಂಗ್ರೆಸ್ ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಯ ಸಿದ್ಧಾಂತದ ನಡುವಿನ ವ್ಯತ್ಯಾಸ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಿಡಿಕಾರಿದ್ದಾರೆ.

Facebook Comments

Sri Raghav

Admin