ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ಶಿಲಾನ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

Bullet-Train--03

ಅಹಮದಾಬಾದ್, ಸೆ.14-ಮಹತ್ವಾಕಾಂಕ್ಷಿ ಯೋಜನೆಯಾದ ಬುಲೆಟ್ ರೈಲು ಯೋಜನೆಯಿಂದ ನವಭಾರತ ನಿರ್ಮಾಣದಲ್ಲಿ ದಿಟ್ಟ ಹೆಜ್ಜೆಯಾಗಿದ್ದು, ದೇಶದ ಅಭಿವೃದ್ದಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪ್ರಗತಿಗೆ ಕಾಲ ಸನ್ನಿಹಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಅಭಿವೃದ್ದಿಗಾಗಿ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡರೆ ಬಡತನವನ್ನು ನಿರ್ಮೂಲನೆ ಮಾಡಬಹುದು ಎಂದೂ ಅವರು ಹೇಳಿದ್ದಾರೆ. ದೇಶದ ಮಹತ್ವಾಕಾಂಕ್ಷಿ ಮತ್ತು ಪ್ರಥಮ ಹೈ-ಸ್ಪೀಡ್ ಬುಲೆಟ್ ರೈಲ್ವೆ ಯೋಜನೆಗೆ ಇಂದು ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಿದರು. ಸಮಾರಂಭದ ಬಳಿಕ ಮಾತನಾಡಿದ ಮೋದಿ ಇದರೊಂದಿಗೆ ಭಾರತದ ಬಹುದೊಡ್ಡ ಕನಸು ಸಾಕಾರಗೊಂಡಿದೆ ಎಂದು ಹೇಳಿದರು.

Bullet-Train--02

ಉದಯರವಿ ನಾಡು ಜಪಾನಿನ ಪ್ರಧಾನಿ ಶಿಂಜೋ ಅಬೆ ವಿಶ್ವದ ಪ್ರಬಲ ನಾಯಕರು ಅವರು ಭಾರತದ ಆಪ್ತಮಿತ್ರ. ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಜಪಾನ್ ಭಾರತದ ಮಿತ್ರ ಎಂಬುದನ್ನು ಸಾಬೀತು ಮಾಡಿದೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ (ಶೇ.0.1ರಷ್ಟು ಬಡ್ಡಿ) 88 ಸಾವಿರ ಕೋಟಿ ರೂ.ಗಳ ಸಹಕಾರ ನೀಡಿದ್ದು, ಮರು ಪಾವತಿಗೆ 50 ರ್ಷ ಸಮಯಾವಕಾಶ ನೀಡಿದೆ. ಈ ಯೋಜನೆಯಿಂದ ಎರಡು ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಉಭಯ ದೇಶಗಳ ಸ್ನೇಹ ಎಲ್ಲ ಗಡಿಗಳನ್ನು ಮೀರಿದೆ ಎಂದು ಬಣ್ಣಿಸಿದರು.

Bullet-Train--01

ಬುಲೆಟ್ ರೈಲಿನಲ್ಲಿ ಸುರಕ್ಷತೆ ಮತ್ತು ಸುವ್ಯವಸ್ಥೆ ಇದೆ. ಒಂದು ದೇಶದ ವ್ಯವಸ್ಥೆಗೆ ಸಾರಿಗೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಭಾರತ ನಿರ್ಮಾಣವು ಫಾಸ್ಟ್ ಟ್ರ್ಯಾಕ್‍ನಲ್ಲಿ ಅಪರಿಮಿತ ವೇಗ ಪಡೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಜಿಎಸ್‍ಟಿ ತೆರಿಗೆ ಪದ್ದತಿಯೀಂದ ದೇಶದ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಿದೆ. ಉಡಾನ್ ಯೋಜನೆಯಿಂದ ವಿಮಾನಯಾನ ಸಂಖ್ಯೆಯೂ ಹೆಚ್ಚಳವಾಗಲಿದೆ ಎಂದು ಪ್ರದಾನಿ ತಿಳಿಸಿದರು.

ನಮಸ್ಕಾರ್ ಎಂದು ಹಿಂದಿಯಲ್ಲಿ ಭಾಷಣ ಆರಂಭಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ, ಎರಡು ದೇಶಗಳ ನಡುವಣ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಬುಲೆಟ್ ರೈಲಿಗೆ ಶಿಲಾನ್ಯಾಸ ನೆರವೇರಿಸಿದ್ದು ಬಹಳ ಸಂತೋಷವಾಗಿದೆ. ಪ್ರಧಾನಿ ಮೋದಿ ದೂರದೃಷ್ಟಿ ಉಳ್ಳ ನಾಯಕರು. ಭಾರತದ ಮೇಕ್ ಇನ್ ಇಂಡಿಯಾ ಯೋಜನೆಗೆ ಜಪಾನ್ ಕೂಡ ಬದ್ಧವಾಗಿದೆ. ಭಾರತ ಮತ್ತಷ್ಟು ಬಲಿಷ್ಠವಾಗುವುದು ಜಪಾನ್ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಗುಜರಾತ್‍ನ ಅಹಮದಾಬಾದ್‍ನಲ್ಲಿ 1.1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮುಂಬೈ-ಅಹಮದಾಬಾದ್ ಮಾರ್ಗದ 508 ಕಿ.ಮೀ. ಮಾರ್ಗದ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರುವ ಮೂಲಕ ದೇಶದ 2023ರ ಆಗಸ್ಟ್ 15ರಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆ ಕಾರ್ಯಾರಂಭವಾಗಲಿದೆ.

Bullet-rteain

Facebook Comments

Sri Raghav

Admin