ವಿದ್ಯುತ್ ಸಂಪರ್ಕಕ್ಕೆ ಬಿಬಿಎಂಪಿ ಪ್ರಮಾಣ ಪತ್ರ ಅಗತ್ಯವಿಲ್ಲ : ಹೈಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

high-court

ಬೆಂಗಳೂರು,ಸೆ.14-ಫ್ಲ್ಯಾಟ್‍ಗಳ ವಿದ್ಯುತ್ ಸಂಪರ್ಕಕ್ಕೆ ಕೆಇಆರ್‍ಸಿ ನಿಯಮಗಳೇ ಸಾಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಫ್ಲಾಟ್ ಮಾಲೀಕರು ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಬಿಬಿಎಂಪಿಯಿಂದ ಪ್ರತ್ಯೇಕ ಸ್ವಾಧೀನ ಪತ್ರ ಪಡೆಯುವ ಅಗತ್ಯವಿಲ್ಲ. ಕೆಇಆರ್‍ಸಿ ರೂಪಿಸಿರುವ ನಿಯಮಗಳನ್ನು ಪಾಲಿಸಿದರೆ ಸಾಕು ಕೆಇಆರ್‍ಸಿ ಆದೇಶವನ್ನು ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ.

ಫ್ಲಾಟ್ ಮಾಲೀಕರು ಕೆಇಆರ್‍ಸಿ ಆದೇಶ ಆಕ್ಷೇಪಿಸಿ ಬಿಬಿಎಂಪಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನ ಪ್ರಮಾಣ ಪತ್ರದ ಅಗತ್ಯವಿಲ್ಲ. ಕೆಇಆರ್‍ಸಿ ರೂಪಿಸಿರುವ ನಿಯಮಾವಳಿಗಳೇ ಸಾಕು. ಬಿಬಿಎಂಪಿ ಪ್ರಮಾಣ ಪತ್ರಕಡ್ಡಾಯವಲ್ಲ ಎಂದು ಹೇಳಿ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಸ್ವಾಧೀನ ಪ್ರಮಾಣ ಪತ್ರ ಪಡೆಯುವುದು ಬಿಲ್ಡರ್‍ಗಳ ಹೊಣೆ, ಫ್ಲಾಟ್ ಮಾಲೀಕರು ಹೊಣೆಯಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Facebook Comments

Sri Raghav

Admin