ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಬೋಗಿ

ಈ ಸುದ್ದಿಯನ್ನು ಶೇರ್ ಮಾಡಿ

Jammua

ನವದೆಹಲಿ, ಸೆ.14-ದೇಶದ ವಿವಿಧೆಡೆ ರೈಲು ಹಳಿ ತಪ್ಪುತ್ತಿರುವುದು ದಿನನಿತ್ಯದ ಸುದ್ದಿಯಾಗುತ್ತಿದೆ. ರಾಜಧಾನಿ ದೆಹಲಿ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ಜಮ್ಮು ತಾವಿ-ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್‍ನ ಒಂದು ಬೋಗಿ ಹಳಿ ತಪ್ಪಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಕಳೆದ 12 ದಿನಗಳಲ್ಲಿ ರೈಲುಗಳು ಹಳಿ ತಪ್ಪಿದ ಎಂಟನೆ ಘಟನೆ ಇದಾಗಿದೆ. ರೈಲು ಪ್ಲಾಟ್‍ಫಾರಂಗೆ ಆಗಮಿಸುತ್ತಿದ್ದಾಗ ಬೆಳಗ್ಗೆ 6 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

Facebook Comments

Sri Raghav

Admin