ಇನ್ನೂ ಬುದ್ದಿ ಕಲಿಯದ ‘ಕಿರಿಕ್’ ಕೊರಿಯಾ, ಮತ್ತೆ ಕ್ಷಿಪಣಿ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

North-Korea

ಸಿಯೋಲ್,ಸೆ.15-ಭಾರತ- ಅಮೆರಿಕ ಸೇರಿದಂತೆ ಇಡೀ ಅಂತಾರಾಷ್ಟ್ರೀಯ ಸಮುದಾಯದ ವಿರೋಧ ಮತ್ತು ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾನ್ ಉನ್ ಅವರು ಇಂದು ಮತ್ತೆ ಖಂಡಾಂತರ ಕ್ಷಿಪಣೆಯೊಂದನ್ನು ಉಡಾಯಿಸಿ ಮತ್ತೆ ವಿಶ್ವದ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಉತ್ತರ ಕೊರಿಯಾದ ಉದ್ದಟತನವನ್ನು ಗಂಭೀರವಾಗಿ ಪರಿಗಣಿಸಿ ಒಂದೆರಡು ದಿನಗಳ ಹಿಂದಷ್ಟೇ ವ್ಯಾಪಕ ದಿಗ್ಬಂಧನ ಹೇರಿದ ಬೆನ್ನಲೇ ಉನ್ ಮತ್ತೆ ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಈ ದಿಗ್ಬಂಧನ ವಿರುದ್ದ ಕಿಡಿಕಿಡಿಯಾಗಿರುವ ಉತ್ತರ ಕೊರಿಯಾದ ಈ ಸರ್ವಾಧಿಕಾರಿ ಅಮೆರಿಕ ಮತ್ತು ರಾಷ್ಟ್ರಗಳನ್ನು ನಾಶ ಮಾಡುವುದಾಗಿ ನಿನ್ನೆಯಷ್ಟೇ ಹೇಳಿದ್ದರು.

ಇಂದು ಮಧ್ಯಮ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯನ್ನು ಜಪಾನ್‍ನತ್ತ ಗುರಿ ಮಾಡಿ ಫೆಸಿಫಿಕ್ ಮಹಾಸಾಗರದಲ್ಲಿ ಉಡಾಯಿಸಿದ್ದಾರೆ. ಕಳೆದ ವಾರ ಉತ್ತರ ಕೊರಿಯಾ ಉಡಾಯಿಸಿದ್ದ ಕ್ಷಿಪಣಿಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಲಘುವಾಗಿ ಭೂಮಿ ಕಂಪಿಸಿದ್ದು ಕೂಡ ದಾಖಲಾಗಿತ್ತು. ಇಂದು ಉಡಾಯಿಸಿರುವ ಈ ಕ್ಷಿಪಣಿ 3,700 ಕಿ.ಮೀ ವ್ಯಾಪ್ತಿಗೆ ಚಿಮ್ಮುವ ಸಾಮಥ್ರ್ಯ ಹೊಂದಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತೊಯ್ದು ಸಿಡಿಸುವ ಸಾಮಥ್ರ್ಯ ಹೊಂದಿದೆ ಎಂದು ಉತ್ತರ ಕೊರಿಯಾದ ರಕ್ಷಣಾ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಅಮೆರಿಕ ಆಕ್ರೋಶ:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಂಗ್ ಜಾನ್ ಉಂಗ್ ಫೆಸಿಫಿಕ್ ಮಹಾಸಾಗರದಲ್ಲಿ ಖಂಡಾಂತರ ಕ್ಷಿಪಣಿ ಉಡಾಯಿಸಿರುವುದನ್ನು ದೃಢೀಕರಿಸಿರುವ ಅಮೆರಿಕ ಪ್ಯೇ0ಗ್ಯಾಂಗ್ ಉದ್ಧಟತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ಹವಾಯಿ ಕಾಲಮಾನದ ಪ್ರಕಾರ 11.57ಕ್ಕೆ ಸರಿಯಾಗಿ ಉತ್ತರ ಕೊರಿಯಾ ಮಧ್ಯಮ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಉಡಾಯಿಸಿರುವುದನ್ನು ನಾವು ದಾಖಲು ಮಾಡಿದ್ದೇವೆ ಎಂದು ವಿಶ್ವಸಂಸ್ಥೆಯ ಫೆಸಿಫಿಕ್ ಕಮಾಂಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Facebook Comments

Sri Raghav

Admin