ಏಕದಿನ ಟಾಪ್ 1 ಸ್ಥಾನಕ್ಕಾಗಿ ವಿರಾಟ್- ಸ್ಮಿತ್ ಬಳಗ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

KOhli--01

ನವದೆಹಲಿ, ಸೆ.15- ಐಸಿಸಿ ಟಾಪ್ 1 ಸ್ಥಾನಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಬಲ ಪೈಪೋಟಿ ನಡೆಸುತ್ತಿವೆ. ಪ್ರಸ್ತುತ ಎರಡು ತಂಡಗಳು 117 ಅಂಕಗಳೊಂದಿಗೆ ಹೊಂದಿದ್ದರೂ ಆಸ್ಟ್ರೇಲಿಯಾ ಎರಡನೇ ಹಾಗೂ ಭಾರತ ಮೂರನೇ ಸ್ಥಾನವನ್ನು ಅಲಂಕರಿಸಿದ್ದರೆ ದಕ್ಷಿಣ ಆಫ್ರಿಕಾ 199 ಅಂಕಗಳನ್ನು ಗಳಿಸಿ ಟಾಪ್ 1 ಆಗಿ ಗುರುತಿಸಿಕೊಂಡಿದೆ . ಆದ್ದರಿಂದ 5 ಏಕದಿನ ಪಂದ್ಯಗಳ ಸರಣಿಯು ಕುತೂಹಲ ಮೂಡಿಸಿದೆ.

ಪಾಯಿಂಟ್ಸ್ ಲೆಕ್ಕಾಚಾರ ಹೇಗೆ?

* ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು 5-0 ಯಿಂದ ಸೋಲಿಸಿದರೆ 122 ಅಂಕ ಗಳಿಸುತ್ತದೆ, ಆಗ ಆಸ್ಟ್ರೇಲಿಯಾ 113 ಪಾಯಿಂಟ್ ಗಳಿಸಿ 3ನೆ ಸ್ಥಾನಕ್ಕೆ ಕುಸಿಯುತ್ತದೆ.
* ಆಸ್ಟ್ರೇಲಿಯಾ ಬಳಗವು ಭಾರತ ತಂಡವನ್ನು 4-1 ಯಿಂದ ಮಣಿಸಿದರೆ ಆಗ ಆಸೀಸ್ 120 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದರೆ ಟೀಂಇಂಡಿಯಾ 114 ಪಾಯಿಂಟ್ಸ್ ಗಳಿಸಿದಂತಾಗುತ್ತದೆ.
* ಒಂದು ವೇಳೆ ವಿರಾಟ್ ಕೊಹ್ಲಿ ಬಳಗವು ಸ್ಟೀವ್ ಸ್ಮಿತ್ ತಂಡವನ್ನು 3-2 ರಿಂದ ಮಣಿಸಿದರೆ ಭಾರತ 118 ಅಂಕಗಳನ್ನು ಗಳಿಸಿ 2ನೆ ಸ್ಥಾನಕ್ಕೇರಿದರೆ ಆಸ್ಟ್ರೇಲಿಯಾ 116 ಅಂಕಗಳಿಗೆ ಕುಸಿದು 3ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ನಾಲ್ಕನೇ ಪಂದ್ಯಕ್ಕೆ ಬೆಂಗಳೂರು ಅತಿಥ್ಯ:

ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯಲಿರುವ ನಾಲ್ಕನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಅತಿಥ್ಯ ವಹಿಸಲಿದ್ದು ದಸರಾದ ಮೋಜಿನಲ್ಲಿರುವ ಸಿಲಿಕಾನ್ ಸಿಟಿ ಮಂದಿಯ ಮಜಾವನ್ನು ದುಪ್ಪಟ್ಟನ್ನು ಮಾಡಲಿದೆ.

ಪಂದ್ಯಗಳ ವಿವರ:

ಮೊದಲಏಕದಿನ ಪಂದ್ಯ: ಸೆಪ್ಟೆಂಬರ್ 17- ಚೆನ್ನೈ
ದ್ವಿತೀಯ ಪಂದ್ಯ: ಸೆಪ್ಟೆಂಬರ್ 21- ಕೋಲ್ಕತ್ತಾ
ಮೂರನೇ ಪಂದ್ಯ: ಸೆಪ್ಟೆಂಬರ್ 24- ಇಂಧೋರ್
ನಾಲ್ಕನೇ ಪಂದ್ಯ: ಸೆಪ್ಟೆಂಬರ್ 28- ಬೆಂಗಳೂರು
ಐದನೇ ಪಂದ್ಯ: ಅಕ್ಟೋಬರ್ 1- ನಾಗ್ಪುರ

ಟ್ವೆಂಟಿ ಪಂದ್ಯಗಳು:

ಮೊದಲ ಟ್ವೆಂಟಿ-20: ಅಕ್ಟೋಬರ್ 7- ರಾಂಚಿ
ದ್ವಿತೀಯ ಟ್ವೆಂಟಿ-20: ಅಕ್ಟೋಬರ್ 10- ಗುವಹಾಟಿ
ತೃತೀಯ ಟ್ವೆಂಟಿ-20: ಅಕ್ಟೋಬರ್ 13- ಹೈದ್ರಾಬಾದ್

Facebook Comments

Sri Raghav

Admin