ಖಗ್ರಾಗಢ ಸ್ಫೋಟ ಪ್ರಕರಣದ ಶಂಕಿತನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಕೋಲ್ಕತ್ತಾ, ಸೆ.15-ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳದ ಖಗ್ರಾಗಢ ಸ್ಫೋಟದ ಶಂಕಿತನೊಬ್ಬನನ್ನು ನಗರ ಪೊಲೀಸ್ ವಿಶೇಷ ಕಾರ್ಯಪಡೆ ನಿನ್ನೆ ಬಂಧಿಸಿದೆ.ಬುರ್ಹಾನ್ ಶೇಖ್ ಬಂಧಿತ ಆರೋಪಿಯಾಗಿದ್ದು, ಕಳೆದ 2014ರ ಅಕ್ಟೋಬರ್‍ನಲ್ಲಿ ಬದ್ರ್ವಾನ್ ಜಿಲ್ಲೆಯ ಖಗ್ರಾಗಢ ದಲ್ಲಿ ಸ್ಫೋಟ ನಡೆದಿತ್ತು. ಇದಾದ ಬಳಿಕ ಬುರ್ಹಾನ್ ಶೇಖ್ ತಲೆ ಮರೆಸಿಕೊಂಡಿದ್ದು, ಈತನ ಹಿಡಿದುಕೊಟ್ಟವರಿಗೆ 3 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿತ್ತು.
ನಂತರ ಈ ಸ್ಫೋಟಕ್ಕೆ ಸಂಬಂಧಿಸಿದಂತೆ 30 ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ನಿನ್ನೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ನಗರ ಪೊಲೀಸ್ ವಿಶೇಷ ಕಾರ್ಯಪಡೆ ಬಿ.ಬಿ.ಗಂಗೂಲಿ ಬೀದಿಯಲ್ಲಿರುವ ಹೊಟೇಲ್‍ನ ಕೊಠಡಿಯೊಂದರಲ್ಲಿ ಆರೋಪಿಯನ್ನು ಬಂಧಿಸಿದೆ.

Facebook Comments

Sri Raghav

Admin