ನನ್ನ ಮಗನಿಗೇಕೆ ಹಿಂಸೆ-ನನ್ನನ್ನೇ ತನಿಖೆಗೊಳಪಡಿಸಿ : ಚಿದಂಬರಂ

ಈ ಸುದ್ದಿಯನ್ನು ಶೇರ್ ಮಾಡಿ

Chidambaram-Son-01

ನವದೆಹಲಿ,ಸೆ.15-ಏರ್‍ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮಗ ಕಾರ್ತಿಗೆ ಅನಗತ್ಯ ಹಿಂಸೆ ನೀಡುವುದರ ಬದಲು ಸಿಬಿಐ ನನ್ನನ್ನು ತನಿಖೆಗೊಳಪಡಿಸಲಿ ಎಂದು ಹೇಳಿರುವ ಮಾಜಿ ವಿತ್ತ ಸಚಿವ ಚಿದಂಬರಂ, ತನಿಖಾ ಸಂಸ್ಥೆ ಸುಮ್ಮನೆ ತಪ್ಪು ಮಾಹಿತಿಗಳನ್ನು ನೀಡುವಲ್ಲಿ ನಿರತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  2006ರಲ್ಲಿ ನಡೆದಿದ್ದ ಏರ್‍ಸೆಲ್ ಮ್ಯಾಕ್ಸಿಸ್ ವ್ಯವಹಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸುಗಮವಾಗುವಂತೆ ಒಪ್ಪಂದ ನಡೆಸಲಾಗಿತ್ತು. ಆಗ ಪಿ.ಚಿದಂಬರಂ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ನಿನ್ನೆ ಮಾಜಿ ಸಚಿವರ ಪುತ್ರ ಕಾರ್ತಿಯನ್ನು ವಿಚಾರಣೆಗೊಳಪಡಿಸಿತ್ತು.

ಆದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ವಿಚಾರಣೆ ಪ್ರಕ್ರಿಯೆಗಳನ್ನು ಆಗಲೇ ವಜಾಗೊಳಿಸಿತು. ಹಾಗಾಗಿ ನಾನು ಈ ವಿಚಾರದಲ್ಲಿ ತನಿಖೆಗೆ ಹಾಜರಾಗುವುದಿಲ್ಲ ಎಂದು ಹೇಳಿ ಕಾರ್ತಿ ಸಿಬಿಐ ಭೇಟಿಗೆ ನಿರಾಕರಿಸಿದ್ದರು.

Facebook Comments

Sri Raghav

Admin