ಮತ ಯಂತ್ರ ದುರ್ಬಳಕೆ ಸುಳಿವು : ವಿವಿ ಪ್ಯಾಟ್ ಅಳವಡಿಸಲು ಆಯೋಗಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Voting-Machine--01

ಬೆಂಗಳೂರು, ಸೆ.15- ಮುಂಬ ರುವ 2018ರ ಚುನಾವಣೆಯಲ್ಲಿ ಇವಿಎಂ ಯಂತ್ರಕ್ಕೆ ಹ್ಯಾಕ್ ಆಗಬಹು ದೆಂಬ ಭಯದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು ಘಟಕ ಇವಿಎಂ ಮೆಷಿನ್‍ಗಳಿಗೆ ವಿವಿ ಪ್ಯಾಟ್ ಅಳವಡಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಮನವಿ ಮಾಡಲು ಮುಂದಾಗಿರುವುದಲ್ಲದೆ, ಇದನ್ನು ಕಡ್ಡಾಯಗೊಳಿಸುವಂತೆ ಹೈಕೋರ್ಟ್‍ಗೆ ರಿಟ್ ಸಲ್ಲಿಸಲು ಕೂಡ ಸಜ್ಜಾಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮುಂತಾದ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತ ಯಂತ್ರಗಳ ದುರ್ಬಳಕೆಯಾಗಿದೆ ಎಂಬ ಆರೋಪ ಪ್ರಬಲವಾಗಿ ಕೇಳಿಬಂದಿತ್ತು.

ಮುಂಬರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಮತ ಯಂತ್ರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ನಿದ್ದೆಗೆಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಕೆಪಿಸಿಸಿಯಲ್ಲಿ ಸಭೆ ನಡೆಸಿ ನಿರ್ಣಯವೊಂದನ್ನು ಅಂಗೀಕರಿಸಿ ಮತಯಂತ್ರಕ್ಕೆ ವಿವಿ ಪ್ಯಾಟ್ (ವೋಟರ್ ವೇರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್) ಅಳವಡಿಸಬೇಕೆಂದು ಚುನಾವಣಾ ಆಯೋಗದ ಕದ ತಟ್ಟಲು ಮುಂದಾಗಿದ್ದಾರೆ. ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಬಹುದೆಂಬ ಸುಳಿವು ಕಾಂಗ್ರೆಸ್‍ನಾಯಕರಿಗೆ ಸಿಕ್ಕಿದೆ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.

ಅಲ್ಲದೆ, ವಿವಿ ಪ್ಯಾಟ್ ಅಳವಡಿಸುವುದು ಕಡ್ಡಾಯ ಮಾಡುವಂತೆ ಹೈಕೋರ್ಟ್‍ಗೂ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ಕೆಪಿಸಿಸಿಯ ಈ ನಿರ್ಣಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೂಡ ಸಾಥ್ ನೀಡಿದೆ. ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣಾ ಸಂದರ್ಭದಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಒಲವಿದೆ. ಹಲವು ಸಮೀಕ್ಷೆಗಳಿಂದ ಕಾಂಗ್ರೆಸ್ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಬಿಜೆಪಿ ಹಲವಾರು ಕಸರತ್ತುಗಳನ್ನು ನಡೆಸಿದ್ದು, ಯಾವುದೂ ಕೈಗೂಡದ ಹಿನ್ನೆಲೆಯಲ್ಲಿ ಮತ ಯಂತ್ರಕ್ಕೆ ಕೈ ಹಾಕಬಹುದೆಂಬ ಭೀತಿ ಕಾಂಗ್ರೆಸ್‍ಗೆ ಎದುರಾಗಿದೆ. ಹಾಗಾಗಿ ವಿವಿ ಪ್ಯಾಟನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಆಗ್ರಹಿಸಿದೆ. ಕೆಪಿಸಿಸಿ ಕಾನೂನು ಘಟಕದ ಮೂಲಕ ಚುನಾವಣಾ ಆಯೋಗಕ್ಕೆ ಮತ್ತು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ.

Facebook Comments

Sri Raghav

Admin