ಮಧ್ಯಾಹ್ನ ಉಪಹಾರ ಸೇವಿಸಿ 80 ವಿದ್ಯಾರ್ಥಿಗಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Students

ಭವಾನಿ ಪಟ್ನ, ಸೆ.15- ಮಧ್ಯಾಹ್ನ ಉಪಹಾರ ಸೇವಿಸಿದ ಐದು ಶಾಲೆಗಳ 80 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ. ಕಲಹಂಡಿ ಜಿಲ್ಲೆಯ ಲುಮಾ, ಕುಬ್ರಿ, ಬಂಧ್‍ಪರಿ, ರಂಜೆಂದ್ರಪುರ್ ಮತ್ತು ಡಂಗ್ರಿ ಗ್ರಾಮಗಳ ಶಾಲೆ ಮಕ್ಕಳು ಅಸ್ವಸ್ಥರಾಗಿದ್ದಾರೆ. ಟ್ರಸ್ಟ್‍ವೊಂದರ ಸಹಯೋಗದಲ್ಲಿ ಲಂಜ್‍ಗಢ್ ವಿಭಾಗದಿಂದ ಉಪಹಾರ ತಯಾರಿಸಿ 176 ಶಾಲೆಗಳಿಗೆ ಮಧ್ಯಾಹ್ನದ ಉಪಹಾರ ನೀಡಲಾಗುತ್ತಿತ್ತು. ಅದರಂತೆ ಈ ಐದೂ ಶಾಲೆಗಳಿಗೂ ಕೂಡ ನಿನ್ನೆ ಮಧ್ಯಾಹ್ನ ಉಪಹಾರ ನೀಡಲಾಗಿತ್ತು.

ಉಪಹಾರ ಸೇವಿಸಿದ ನಂತರ ಐದೂ ಶಾಲೆಗಳ 80 ಮಂದಿ ವಿದ್ಯಾರ್ಥಿಗಳಿಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಅಸ್ವಸ್ಥ ವಿದ್ಯಾರ್ಥಿಗಳನ್ನುಬಿಸ್ವಾಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರನ್ನು ಭವಾನಿ ಪಟ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪ್ರದೀಪ್‍ಕುಮಾರ್ ನಾಯಕ್ ಮಾಹಿತಿ ನೀಡಿದ್ದಾರೆ. ಬಿಸ್ವಾಂತಪುರ ಆಸ್ಪತ್ರೆಗೆ ಉಪ ಜಿಲ್ಲಾಧಿಕಾರಿ ತಹಸೀಲ್ದಾರ್ ಭೇಟಿ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ. ಕೆಲವು ವಿದ್ಯಾರ್ಥಿಗಳು ಈಗಾಗಲೇ ಚೇತರಿಸಿಕೊಂಡಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ. ಮಕ್ಕಳ ಅಸ್ವಸ್ಥತೆಗೆ ಆಹಾರದಲ್ಲಿ ಏರುಪೇರಾಗಿರಬಹುದೇ ಎಂದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಂಜನ್‍ಕುಮಾರ್ ಮಲ್ಲಿಕ್ ತಿಳಿಸಿದ್ದಾರೆ.

Facebook Comments

Sri Raghav

Admin