ರೇಪಿಸ್ಟ್ ಬಾಬಾ ರಾಮ್ ರಹೀಮ್ ಗೆ ಶಿಕ್ಷೆಯಾದಾಗ ನಡೆದಿದ್ದ ಹಿಂಸಾಚಾರದ ರೂವಾರಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim--101

ಪಾಟಿಪತ್,ಸೆ.15- ಅತ್ಯಾಚಾರಿ, ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅಪರಾಧಿ ಎಂದು ನ್ಯಾಯಾಲಯ ಹೇಳಿದ ಸಂದರ್ಭ ನಡೆದಿದ್ದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ, ದೇರಾ ಸಚ್ ಸೌದಾ ಸಕ್ರಿಯ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಹಿಂಸಾಚಾರದ ಸೂತ್ರಧಾರಿ ದಿಲಾದರ್ ಇನ್ಸಾನ್ ಎಂಬುವನನ್ನು ಪಾಣಿಪತ್‍ನಲ್ಲಿ ನಿನ್ನೆ ಮಧ್ಯರಾತ್ರಿ ಬಂಧಿಸಲಾಯಿತು ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ.ಎಸ್.ಸಂಧು ತಿಳಿಸಿದ್ದಾರೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ರಾಮ್ ರಹೀಮ್ ಬಾಬಾ ಮಾಡಿದ್ದ ಅತ್ಯಾಚಾರ, ದುರ್ವ್ಯವಹಾರಗಳು ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಆ.25ರಂದು ಬಾಬಾನನ್ನು ಅಪರಾಧಿ ಎಂದು ಘೋಷಿಸಿತು. ಈ ಸಂದರ್ಭಬಾಬಾನ ಹಿಂಬಾಲಕರು ವ್ಯಾಪಕ ಹಿಂಸಾಚಾರ ನಡೆಸಿದ್ದರು.  ಈ ಹಿಂಸಾಚಾರದಲ್ಲಿ ಪಂಚಕುಲ ಮತ್ತು ಸಿರ್ಸಾಗಳಲ್ಲಿ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಹಿಂಸಾಚಾರ ನಡೆಸಿ ಬಾಬಾನನ್ನು ಪೊಲೀಸರ ಕೈ ತಪ್ಪಿಸುವ ಉದ್ದೇಶದಿಂದ ಅವನ ಅನುಯಾಯಿಗಳು ಈ ಹಿಂಸಾಚಾರ ನಡೆಸಲು ಯೋಜನೆ ರೂಪಿಸಿದ್ದರು. ಅದರಂತೆಯೇ ಹಿಂಸಾಚಾರ ನಡೆದು ಜನ ಸಾವನ್ನಪ್ಪಿದರಾದರೂ ಬಾಬಾನನ್ನು ಕರೆದೊಯ್ಯುವಲ್ಲಿ ಬಾಬಾನ ಖತರ್ನಾಕ್ ಶಿಷ್ಯರು ವಿಫಲರಾದರು.

ಹಿಂಸಾಚಾರದ ಸೂತ್ರಧಾರಿ ದಿಲಾವರ್ ಇನ್ಸಾನ್ ದೇರಾ ಸೌದನ ವಕ್ತರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಘಟನೆ ನಡೆದ ಸಂದರ್ಭ ದಿಲಾವರ್ ತಲೆ ತಪ್ಪಿಸಿಕೊಂಡಿದ್ದ. ಈ ಮಧ್ಯೆ ರೋಹ್ಟಕ್‍ನ ಸೋನಾರಿಯಾ ಜೈಲಲ್ಲಿ ರೊಟ್ಟಿ ಕಡಿಯುತ್ತಿರುವ ಅತ್ಯಾಚಾರಿ ಬಾಬಾ ನಿನ್ನೆ ಜೈಲಿನಲ್ಲಿ ತನ್ನ ತಾಯಿ ನಸೀಬ್ ಕೌರ್‍ಳನ್ನು ಭೇಟಿ ಮಾಡಿದ್ದಾನೆ.

Facebook Comments

Sri Raghav

Admin