ಲಕ್ಷ್ಮೀದೇವಿ ಪುತ್ಥಳಿ ಸ್ಥಾಪನೆ ಸಂಬಂಧ ನಾಳೆ ಪೂರ್ವಭಾವಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

lakshmi-01

ಬೆಂಗಳೂರು, ಸೆ.15- ನಾಡಪ್ರಭು ಕೆಂಪೇಗೌಡರ ಸೊಸೆ ತ್ಯಾಗಿ ಲಕ್ಷ್ಮೀದೇವಿ ಅವರ 10 ಅಡಿ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಂಬಂಧ ನಾಳೆ (ಸೆ.16) ಸಂಜೆ 3.30ಕ್ಕೆ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಬಿಬಿಎಂಪಿ ಆವರಣ ದಲ್ಲಿ ಸೆ.22ರಂದು ಪ್ರತಿಷಾ ಸ್ಥಾಪಿಸಲು ನಿರ್ಧರಿಸಿದ್ದು, ಬಿಬಿಎಂಪಿಗೆ ಸಹಕಾರ ನೀಡುವ ಕುರಿತಂತೆ ಈ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ನಗರದ ಹಾಲಿ ಮತ್ತು ಮಾಜಿ ಶಾಸಕರು, ಬಿಬಿಎಂಪಿ ಸದಸ್ಯರು, ಒಕ್ಕಲಿಗ ಸಮಾಜದ ಹಾಗೂ ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅಭೂತಪೂರ್ವ ಕಾರ್ಯ ಕ್ರಮಕ್ಕೆ ಸಲಹೆ-ಸಹಕಾರ ನೀಡಬೇಕೆಂದು ಕೋರಮಂಗಲದಲ್ಲಿರುವ ತ್ಯಾಗಿ ಲಕ್ಷ್ಮೀದೇವಿ ಸ್ಮಾರಕ, ಕಂಚಿನ ಪ್ರತಿಮೆ ಹಾಗೂ ಶಿಲಾ ಶಾಸನದ ಪ್ರತಿಷ್ಠಾಪಕರು ಹಾಗೂ ವಿಶ್ವ ಒಕ್ಕಲಿಗರ ಡೈರೆಕ್ಟರಿ ಸಂಪಾದಕರೂ ಆಗಿರುವ ಕೆ.ಟಿ.ಚಂದ್ರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin