ಸಿಂಧೂನದಿ ಜಲ ವಿವಾದ ಸಂಬಂಧಿಸಿದಂತೆ ಭಾರತ-ಪಾಕ್ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

Sindhu-01

ವಾಷಿಂಗ್ಟನ್,ಸೆ.15- ಇಂಡಸ್(ಸಿಂಧೂ)ನದಿ ಜಲವಿವಾದ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆ ನಡೆಸುತ್ತಿವೆ ಎಂದು ವಿಶ್ವ ಬ್ಯಾಂಕ್‍ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಭಯ ದೇಶಗಳ ಜನತೆಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಎರಡೂ ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಹಿಂದಿನ ಒಪ್ಪಂದವನ್ನು ಯಾವ ವಿಧದಲ್ಲಿ ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗಬಹುದು ಎಂಬ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ವಿಶ್ವಬ್ಯಾಂಕ್ ವಕ್ತಾರರು ಹೇಳಿದ್ದಾರೆ.

ನಿನ್ನೆಯಿಂದ ಇಲ್ಲಿ ಆರಂಭವಾಗಿರುವ ಉನ್ನತ ಮಟ್ಟದ ಮಾತುಕತೆಯಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಈ ಸಿಂಧೂ ನದಿ ಒಪ್ಪಂದದ ಬಗ್ಗೆ ತಾಂತ್ರಿಕ ವಿಷಯಗಳನ್ನು ಕುರಿತಾದ ವಿಷಯಗಳು ಪ್ರಸ್ತಾಪವಾಗುತ್ತಿವೆ. ಎರಡನೇ ದಿನವಾದ ಇಂದು ಮಾತುಕತೆ ಮುಕ್ತಾಯಗೊಳ್ಳಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಜಲ ಒಪ್ಪಂದದ ಪ್ರಕಾರ ಕೆಲವೊಂದು ನಿಬಂಧನೆಗಳೊಂದಿಗೆ ಝೀಲಂ ಮತ್ತು ಚಿನಾಬ್ ನದಿಗಳನ್ನು ಬಳಸಿಕೊಂಡು ಭಾರತವು ಜಲ ವಿದ್ಯುತ್ ಉತ್ಪಾದನೆಯ ಕಾರ್ಯಕ್ರಮ ನಡೆಸಬಹುದು ಎಂದು ವಿಶ್ವಬ್ಯಾಂಕ್ ಕಳೆದ ಆಗಸ್ಟ್‍ನಲ್ಲಿ ತಿಳಿಸುವ ಮೂಲಕ ಭಾರತದ ವಾದವನ್ನು ಬೆಂಬಲಿಸಿತ್ತು.

Facebook Comments

Sri Raghav

Admin