1920 ರಲ್ಲೇ ಹೊರವರ್ತುಲ ರಸ್ತೆ ಅಗತ್ಯದ ಬಗ್ಗೆ ಸರ್‍.ಎಂ.ವಿಶ್ವೇಶ್ವರಯ್ಯ ಪ್ರಸ್ತಾಪಿಸಿದ್ದರು

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಬೆಂಗಳೂರು, ಸೆ.15- ಬೆಳೆಯುತ್ತಿರುವ ಬೆಂಗಳೂರಿಗೆ ಹೊರವರ್ತುಲ ರಸ್ತೆಗಳ ಅವಶ್ಯಕತೆ ಇದೆ ಎಂದು 1920 ರಲ್ಲೇ ಪ್ರತಿಪಾದಿಸಿದುದ್ದು ನಮ್ಮ ತಾತಾ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರು ಎಂದು ಅವರ ಮೊಮ್ಮಗ ಸತೀಶ್ ಮೋಕ್ಷ ಗುಂಡಂ ಇಂದಿಲ್ಲಿ ತಿಳಿಸಿದರು.  ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಯಡಿ ಯೂರು ವಾರ್ಡ್‍ನ ರಣಧೀರ ಕಂಠೀರವ ಉದ್ಯಾನವನದಲ್ಲಿ ವಿಶ್ವೇಶ್ವರಯ್ಯನವರ ಕಂಚಿನ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1920ರಲ್ಲೇ ಕೋಲ್ಕತ್ತಾ ಮತ್ತು ಮುಂಬೈ ಮಹಾನಗರಗಳಿಗೆ ಭೂಗರ್ಭ ರೈಲು ಬೇಕು ಎಂದು ಹೇಳಿದ್ದು ನಮ್ಮ ತಾತ ವಿಶ್ವೇಶ್ವರಯ್ಯನವರೇ. ಅದೇ ರೀತಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿಯಾಗಲು ಹೊರವರ್ತುಲ ರಸ್ತೆ ಮಾಡಬೇಕೆಂದು ಅವರು ಪ್ರತಿಪಾದಿಸಿದ್ದರು. ಹೊರವರ್ತುಲ ರಸ್ತೆ ಮಾಡದಿದ್ದರೆ ವಾಹನ ದಟ್ಟಣೆ ನಿಯಂತ್ರಿಸುವುದು ಕಷ್ಟವಾಗುತ್ತಿತ್ತು. ಇಂತಹ ಮಹಾನೀಯರ ಮೊಮ್ಮಗ ನಾನು ಎಂಬುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದರು.
ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಮಾತ ನಾಡಿ, ದೇಶದ ಪ್ರಪ್ರಥಮ ಇಂಜಿನಿಯರ್ ವಿಶ್ವೇಶ್ವರಯ್ಯ ನವರು. ಅದರಲ್ಲೂ ಅವರು ಕನ್ನಡಿಗರು ಎಂಬುದು ಹೆಮ್ಮೆಯ ಸಂಗತಿ. ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಸಮಾರಂಭಕ್ಕೆ ಶುಭು ಕೋರಿರು ವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಸರ್.ಎಂ.ವಿ ಅವರ ಜನ್ಮದಿನವನ್ನು ಇಂಜಿನಿಯರ್ ಗಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಅವರ ಸಾಧನೆ ಅಪ್ರತಿಮ ಎಂದು ಕೊಂಡಾಡಿದರು.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಮಾತನಾಡಿ, ಐದು ಲಕ್ಷ ರೂ. ವೆಚ್ಚದಲ್ಲಿ ನಾವು ವಿಶ್ವೇಶ್ವರಯ್ಯನವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ. ಪ್ರತಿಮೆಯ ಸುತ್ತಮುತ್ತ ಅವರ ಜೀವನ ಹಾಗೂ ಸಾಧನೆ ಕೆತ್ತಿಸಿದ್ದೇವೆ. ಪ್ರತಿಮೆಯನ್ನು ನೋಡಿದ ಜನರಿಗೆ ಸರ್.ಎಂ.ವಿ ಅವರ ಸಾಧನೆ ಹಾಗೂ ಅವರ ಜೀವನ ಚರಿತ್ರೆ ಅರಿಯಲು ಸಹಕಾರಿಯಾಗಲಿದೆ ಎಂದರು.
ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಹಾಜರಿದ್ದರು.

Facebook Comments

Sri Raghav

Admin