ಇರ್ಮಾ ಎಫೆಕ್ಟ್ ನಿಂದಾಗಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ

ಈ ಸುದ್ದಿಯನ್ನು ಶೇರ್ ಮಾಡಿ

Irma--01

ಮಿಯಾಮಿ,ಸೆ.16- ಅಮೆರಿಕದ ಆಗ್ನೇಯ ಭಾಗದ ಮೇಲೆ ಅಪ್ಪಳಿಸಿದ ಇರ್ಮಾ ಚಂಡಮಾರುತದ ಪ್ರಕೋಪದಿಂದ ಚೇತರಿಸಿಕೊಳ್ಳಲು ಮಿಯಾಮಿ ಪ್ರಾಂತ್ಯ ಹೆಣಗುತ್ತಿದೆ. ವಿನಾಶಕಾರಿ ಚಂಡ ಮಾರುತದಿಂದ ಫ್ಲೋರಿಡಾ, ಜಾರ್ಜಿಯಾ ಮತ್ತು ರೋಲಿನಾದಲ್ಲಿ 20 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವ್ಯವಸ್ಥೆಯನ್ನು ಸರಿಪಡಿಸಲು ಕಳೆದು ಐದು ದಿನಗಳಿಂದ ಶ್ರಮಿಸಲಾಗುತ್ತಿದೆ.  ಸೆ.10ರಂದು ಈ ಭಾಗದ ಮೇಲೆ ಬಂದೆರಗಿದ ಚಂಡ ಮಾರುತಕ್ಕೆ 82 ಮಂದಿ ಬಲಿಯಾಗಿ ಅನೇಕರು ಗಾಯಗೊಂಡಿದ್ದಾರೆ. ಪುರ್ಟೊರಿಕೋ, ಕೆರೆಬಿಯನ್ ದ್ವೀಪಗಳು, ವರ್ಜಿನ್ ಐಲ್ಯಾಂಡ್ ತೀವ್ರ ಹಾನಿಗೊಳಗಾಗಿವೆ. ಪ್ರವಾಸಿಗರ ಸ್ವರ್ಗವಾಗಿದ್ದ ಈ ಸ್ಥಳಗಳು ಕೆಲವೇ ಗಂಟೆಗಳಲ್ಲಿ ನರಕ ಸದೃಶ ದ್ವೀಪಗಳಾಗಿ ಮಾರ್ಪಟ್ಟವು.

Facebook Comments

Sri Raghav

Admin