ಗಡಿಯಲ್ಲಿ ನಿಲ್ಲದ ಪಾಕ್ ಪುಂಡಾಟ, ಷೆಲ್ ದಾಳಿ, ಬಿಎಸ್‍ಎಫ್ ಯೋಧರಿಂದ ದಿಟ್ಟ ಪ್ರತ್ಯುತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Firing--Pak-Border--01

ಜಮ್ಮು, ಸೆ.16-ಪಾಕಿಸ್ತಾನಿ ಯೋಧರ ಪುಂಡಾಟ ಸತತ ನಾಲ್ಕನೇ ದಿನವೂ ಮುಂದುವರಿದಿದೆ. ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ(ಐಬಿ) ಬಳಿ ಭಾರತೀಯ ಗಡಿ ಭದ್ರತಾ ಪಡೆ ಔಟ್‍ಪೋಸ್ಟ್‍ಗಳು ಮತ್ತು ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಸೈನಿಕರು ಇಡೀ ರಾತ್ರಿ ಗುಂಡು ಮತ್ತು ಷೆಲ್ ದಾಳಿ ನಡೆಸಿದ್ದಾರೆ. ಬಿಎಸ್‍ಎಫ್ ಯೋಧರೂ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ. ನಿನ್ನೆ ಪಾಕಿಸ್ತಾನಿ ಯೋಧರು ನಡೆಸಿದ ದಾಳಿಯಲ್ಲಿ ಬಿಎಸ್‍ಎಫ್ ಯೋಧನೊಬ್ಬ ಹುತಾತ್ಮನಾಗಿ ಕೆಲವರು ಗಾಯಗೊಂಡಿದ್ದರು. ಇದರ ಹಿಂದೆಯೇ ಪಾಕ್ ರೇಂಜರ್‍ಗಳು ನಿನ್ನೆ ಮಧ್ಯರಾತ್ರಿ ಅರ್ನಿಯಾ ವಲಯದ ಭಾರತೀಯ ಸೇನೆ ನೆಲೆಗಳ ಮೇಲೆ ಗುಂಡು ಹಾರಿಸಿದರು. ಇದರಿಂದಾಗಿ ಬಿಎಸ್‍ಎಫ್ ಯೋಧರು ಪ್ರತಿದಾಳಿ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರಿ ಇಡೀ ನಡೆದ ಗುಂಡಿನ ಮೊರೆತ ಇಂದು ಬೆಳಗ್ಗೆ 6.45ರಲ್ಲಿ ನಿಂತಿದೆ. ಸಾಯಿ, ಟ್ರೆವಾ ಮತ್ತು ಜಬೋವಿ ಗ್ರಾಮಗಳಲ್ಲಿ ಪಾಕಿಸ್ತಾನದ ದಾಳಿಯಿಂದ ಒಂದು ದೇವಾಲಯ, ಎರಡು ಮನೆಗಳು ಮತ್ತು ಮೂರು ಕೊಟ್ಟಿಗೆಗಳು ಹಾನಿಗೀಡಾಗಿವೆ. ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರ್ನಿಯಾ ವಲಯದಲ್ಲಿ ಪಾಕಿಸ್ತಾನಿ ಯೋಧರು ನಿನ್ನೆ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‍ಎಫ್ ಯೋಧ ವಿಜೇಂದರ್ ಬಹದ್ದೂರ್ ಹುತಾತ್ಮನಾಗಿ, ಗ್ರಾಮಸ್ಥನೊಬ್ಬ ತೀವ್ರ ಗಾಯಗೊಂಡಿದ್ದ. ಗುರುವಾರ ಬಿಎಸ್‍ಎಸ್ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ ಇಬ್ಬರು ಯೋಧರು ಮೃತಪಟ್ಟರು. ಪಾಕಿಸ್ತಾನದ ಅಪ್ರಚೋದಿತ ದಾಳಿಯಿಂದ ಭಾರತದ ಮೂವರು ಯೋಧರು ಗಾಯಗೊಂಡರು.

Facebook Comments

Sri Raghav

Admin