ನೈಜೀರಿಯಾದಲ್ಲಿ ಕಿಕ್ಕಿರಿದು ತುಂಬಿದ್ದ ದೋಣಿ ಮುಳುಗಿ 56 ಮಂದಿ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Nigeria-01

ಕಾನೋ, ಸೆ.16-ಕಿಕ್ಕಿರಿದು ತುಂಬಿದ್ದ ದೋಣಿಯೊಂದು ಮುಳುಗೆ 56 ಮಂದಿ ಜಲಸಮಾಧಿಯಾದ ದುರಂತ ನೈಜೀರಿಯಾದಲ್ಲಿ ಸಂಭವಿಸಿದೆ. ನೈಗರ್‍ನಿಂದ ವರ್ತಕರನ್ನು ಹೊತ್ತೊಯ್ಯುತ್ತಿದ್ದ ಈ ದೋಣಿ ನೈಜೀರಿಯಾ ನೈರುತ್ಯ ಭಾಗದಲ್ಲಿ ಕೆಬ್ಬಿ ರಾಜ್ಯದ ದೂರದ ಪ್ರದೇಶದ ನದಿಯೊಂದರಲ್ಲಿ ಗುರುವಾರ ಮುಳುಗಿ ಈ ದುರ್ಘಟನೆ ಸಂಭವಿಸಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ (ನೆಮಾ) ಸಂಚಾಲಯ ಸುಲೇಮಾನ್ ಮಹಮದ್ ಖಾನ್ ತಿಳಿಸಿದ್ದಾರೆ. ಈ ದೋಣಿಯಲ್ಲಿ ಬಹುತೇಕ ಮಂದಿ ಸ್ಥಳೀಯ ವರ್ತಕರಿದ್ದರು.

ಈವರೆಗೆ 33 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ನಾಪತ್ತೆಯಾಗಿರುವ 23 ಮಂದಿ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ. ಸತತ ಶೋಧ ಕಾರ್ಯಾಚರಣೆ ಬಳಿಕವೂ ಯಾರೂ ಪತ್ತೆಯಾಗಿಲ್ಲ. ಹೀಗಾಗಿ ಅವೆರಲ್ಲೂ ನೀರುಪಾಲಾಗಿದ್ದಾರೆ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin