ನೋಟು ಬ್ಯಾನ್ ನಿಂದ ಪತ್ರಿಕೆಗಳ ಜಾಹೀರಾತು ಆದಾಯ ಕುಸಿತ : ಐಎನ್‍ಎಸ್

ಈ ಸುದ್ದಿಯನ್ನು ಶೇರ್ ಮಾಡಿ

notes-ban

ಬೆಂಗಳೂರು, ಸೆ.16-ನೋಟು ಅಮಾನ್ಯ ಕ್ರಮವು ಜಾಹೀರಾತುಗಳ ಕುಸಿತಕ್ಕೆ ಕಾರಣವಾಗುವ ಮೂಲಕ ಪ್ರತಿಕೆಗಳ ಹಣಕಾಸು ಸ್ಥಿತಿಯನ್ನು ಹದಗೆಡಿಸಿದೆ ಎಂದು ಹೇಳಿರುವ ಭಾರತೀಯ ವೃತ್ತಪತ್ರಿಕೆಗಳ ಸಂಘ (ಇಂಡಿಯನ್ ನ್ಯೂಸ್‍ಪೇಪರ್ ಸೊಸೈಟಿ-ಐಎನ್‍ಎಸ್), ಪ್ರತಿಕೋದ್ಯಮವನ್ನು ಬೆಂಬಲಿಸುವಂತೆ ಮತ್ತು ಬಲಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ನಗರದಲ್ಲಿ ನಿನ್ನೆ ನಡೆದ 78ನೇ ವಾರ್ಷಿಕ ಮಹಾಸಭೆಯಲ್ಲಿ ಐಎನ್‍ಎಸ್ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಿರುವ ಸೋಮೇಶ್ ಶರ್ಮಾ ಮಾತನಾಡಿದರು. ಭಾರತೀಯ ವೃತ್ತಪತ್ರಿಕೆಗಳ ಉದ್ಯಮವು ಜಾಹೀರಾತು ಆದಾಯವನ್ನೇ ಬಲವಾಗಿ ನೆಚ್ಚಿಕೊಂಡಿದೆ. ನೋಟು ಅಮಾನ್ಯೀಕರಣ ಕ್ರಮವು ಎಲ್ಲ ವರ್ಗಗಳ ಜಾಹೀರಾತು ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಪತ್ರಿಕೆಗಳ ಹಣಕಾಸು ಸ್ಥಿತಿಯನ್ನು ಹದಗೆಡಿಸಿದೆ ಎಂದು ಅವರು ವಿಷಾದಿಸಿದರು. ಸಮಾಜ ವಿರೋಧಿ ಶಕ್ತಿಗಳಿಂದ ಪತ್ರಕರ್ತರ ಮೇಲಿನ ದಾಳಿಗಳನ್ನು ಅವರು ಖಂಡಿಸಿದರು. ಪತ್ರಿಕಾರಂಗದ ರಕ್ಷಣೆಗೆ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಶರ್ಮಾ ಆಗ್ರಹಿಸಿದರು.

Facebook Comments

Sri Raghav

Admin