ಹುಷಾರ್.. ಪಾರ್ಶ್ವವಾಯು ಬಗ್ಗೆ ಬೇಡ ನಿರ್ಲಕ್ಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Strokew--01

ಪಾರ್ಶ್ವವಾಯು  ಎಂಬುದು ವೈದ್ಯಕೀಯ ತುರ್ತು ಆಗಿದ್ದು, ಐದು ನಿಮಿಷಗಳ ಅವಧಿಯಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಹುದಾಗಿದೆ. ಪಾಶ್ರ್ವವಾಯು ರಕ್ತದ ಹರಿವನ್ನು ಮೆದುಳಿಗೆ ಸ್ಥಗಿತಗೊಳಿಸಲಿದ್ದು, ಮೆದುಳಿನ ಕಣಗಳಿಗೆ ಪ್ರತಿ ಗಂಟೆಗೆ ಲಕ್ಷಾಂತರ ಕಣಗಳಿಗೆಹಾನಿ ಉಂಟುಮಾಡಬಲ್ಲದು. ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್‍ಒ) ಅನ್ವಯ ಪಾರ್ಶ್ವವಾಯು  ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನರರೋಗ ಸಮಸ್ಯೆಯಾಗಿದ್ದು, ದೀರ್ಘಕಾಲದ ಅಂಗವೈಕಲ್ಯವನ್ನು ತರಬಹುದು. ಇದು, ಅನೇಕ ಭಾವನಾತ್ಮಕ ಮತ್ತು ಸಾಮಾಜಿಕ, ಆರ್ಥಿಕ ಪರಿಣಾಮಗಳನ್ನು ರೋಗಿ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಬೀರಬಲ್ಲದಾಗಿದೆ. ಇನ್ನೊಂದೆಡೆ, ದೇಶದಲ್ಲಿ ಪಾಶ್ರ್ವವಾಯು ರೋಗಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ.

ಪ್ರತಿ ವರ್ಷ ಕಾಡುತ್ತಿರುವ ಪಾರ್ಶ್ವವಾಯು ವಿನ ಸ್ವರೂಪವೂ ಭಿನ್ನವಾಗಿದೆ. ಸಾಮಾನ್ಯವಾಗಿ ಕಾಡುವ ಎರಡು ಪಾರ್ಶ್ವವಾಯು ವೆಂದರೆ ಇಶ್ಚೆಮಿಕ್ ಸ್ಟ್ರೋಕ್ ಮತ್ತು ಹೆಮಿರೊಚಾರ್ಜಿಕ್ ಸ್ಟ್ರೋಕ್. ಇಶ್ಚೆಮಿಕ್ ಸ್ಟ್ರೋಕ್‍ನಿಂದ ಸಾಮಾನ್ಯವಾಗಿ ರಕ್ತನಾಳದಲ್ಲಿ ಬ್ಲಾಕೇಜ್ ಇರುತ್ತದೆ. ರಕ್ತದ ಹರಿವನ್ನು ಮೆದುಳಿಗೆ ಸ್ಥಗಿತಗೊಳಿಸಲಿದೆ. ಆಂತರಿಕ ರಕ್ತಸ್ರಾವ ಎರಡನೇ ಸ್ವರೂಪದ ಪಾರ್ಶ್ವವಾಯು ವಿನಲ್ಲಿ ಸಾಮಾನ್ಯವಾಗಿದೆ. ಸುಮಾರು 30 ರಿಂದ 60ರಷ್ಟು ಮಂದಿ ಎರಡನೇ ಸ್ವರೂಪದ ಪಾಶ್ರ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ.

ಸೂಚನೆಗಳು:

ಆಗಾಗ್ಗೆ ಕುಟುಂಬ ಸದಸ್ಯರು, ಗೆಳೆಯರು ಪಾಶ್ರ್ವವಾಯುವಿಗೆ ತುತ್ತಾದ ವ್ಯಕ್ತಿಗೆ ಸಾಕಷ್ಟು ಸಮಯ ವ್ಯಯ ಮಾಡಬೇಕಾಗುತ್ತದೆ. ಇದರ ಸೂಚನೆಗಳನ್ನು ಅರಿತರೆ ಪಾಶ್ರ್ವವಾಯುವಿನ ಚಿಕಿತ್ಸೆ ಸಾಧ್ಯವಾಗಲಿದೆ. ಪಾಶ್ರ್ವವಾಯು ಏಕಾಏಕಿ ಯಾವುದೇ ಮುನ್ನೆಚ್ಚರಿಕೆ ನೀಡದೇ ಬರಲಿದೆ. ಪ್ರತಿ ಬಾರಿಯೂ ಪಾಶ್ರ್ವವಾಯು ಚಿಕಿತ್ಸೆ ಸಿಗದೇ ಮೆದುಳಿಗೆ ರಕ್ತ ಪೂರೈಕೆಯು ಹಂತ ಹಂತವಾಗಿ ಕಡಿಮೆ ಆಗಲಿದೆ. ಪಾಶ್ರ್ವವಾಯುವಿಗೆ ಯಾರಾದರೂ ತುತ್ತಾಗಿದ್ದಾರೆ ಎಂಬುದನ್ನು ಗುರುತಿಸುವುದು ಸುಲಭ. ಇದರ ಸೂಚನೆಗಳನ್ನು ಸುಲಭವಾಗಿ, ತ್ವರಿತವಾಗಿ ಗುರುತಿಸಬಹುದು. ಇದರ ಸೂಚನೆಗಳು ಹೀಗಿವೆ.

* ಮುಖದಲ್ಲಿ ಬೆವರುವಿಕೆ. ಒಂದು ಭಾಗದಲ್ಲಿ ಬೆವರ ಹನಿ ಮೂಡುವುದು
* ಕೈ ದುರ್ಬಲವಾಗುವುದು. ಒಂದು ಕೈ ದುರ್ಬಲವಾಗಲಿದೆ. ಎರಡು ಕೈಗಳನ್ನು ಎತ್ತಲು ಹೇಳಿದರೆ, ಆತ ಒಂದು ಕೈಯನ್ನು ಮಾತ್ರವೇ ಎತ್ತುತ್ತಾನೆ.
* ಮಾತನಾಡುವುದು ಕಷ್ಟವಾಗಲಿದೆ.
* ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟವಾಗಲಿದೆ.
ಅಪಾಯದ ಸಾಧ್ಯತೆಗಳು:
ಇದರ ಅಪಾಯದ ಸಾಧ್ಯತೆಗಳನ್ನು ಅರಿತುಕೊಳ್ಳುವುದು ಮುಖ್ಯವಾಗಲಿದೆ. ಮೂರನೇ ಒಂದಷ್ಟು ಪಾಶ್ರ್ವವಾಯು ಪ್ರಕರಣಗಳು ಎಚ್ಚರಿಕೆಯ ಸೂಚನೆ ನೀಡಲಿದ್ದು, ಶೇ 12ರಷ್ಟು ಪ್ರಕರಣಗಳಲ್ಲಿ 40 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನವರು ಇದಕ್ಕೆ ತುತ್ತಾಗುತ್ತಾರೆ.

ಪಾರ್ಶ್ವವಾಯು ಸಾಧ್ಯತೆಯನ್ನು ಹೆಚ್ಚಿಸುವ ಅನೇಕ ಸಾಧ್ಯತೆಗಳಿದ್ದು, ಇವುಗಳೆಂದರೆ:
* ತಂಬಾಕು ಬಳಕೆ
* ಅಧಿಕ ರಕ್ತದೊತ್ತಡ
* ಅಧಿಕ ಬೊಜ್ಜು
* ಮಧುಮೇಹ
* ದೈಹಿಕ ಅಶಕ್ತತೆ
* ತೂಕ
* ಅನಾರೋಗ್ಯಕರವಾದ ಆಹಾರ ಪಥ್ಯ
* ಮದ್ಯ, ಮಾದಕವಸ್ತು ಬಳಕೆ

ಚಿಕಿತ್ಸೆ:

ಆರಂಭದ ದಿನಗಳಲ್ಲಿ ಪಾಶ್ರ್ವವಾಯುವಿಗೆ ಯಾವುದೇ ಚಿಕಿತ್ಸೆ ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಎಂಡೊವಾಸ್ಕುಲರ್ ಚಿಕಿತ್ಸೆಯು ಲಭ್ಯವಿದ್ದು, ಅತ್ಯುತ್ತಮ ಫಲಿತಾಂಶ ಸಿಗಲಿದೆ. ಪಾಶ್ರ್ವವಾಯು ತಗುಲಿದ ಆರು ಗಂಟೆಗಳಲ್ಲಿ ಹೆಪ್ಪುಗಟ್ಟಿದ ರಕ್ತ ತೆಗೆದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ಇತ್ತೀಚಿನ ಡಾನ್ ಪ್ರಯೋಗದ ಬಳಿಕ ಚಿಕಿತ್ಸೆಯ ಅವಧಿಯನ್ನು 24 ಗಂಟೆ ಕಳೆದೂ ವಿಸ್ತರಿಸಲಾಗಿದೆ.

ನಿಯಂತ್ರಣ:
ಆಹಾರಪಥ್ಯವನ್ನು ಗಂಭೀgವಾಗಿ ಪರಿಗಣಿಸುವುದು, ದೈಹಿಕವಾಗಿ ಆದಷ್ಟು ಕ್ರಿಯಾಶೀಲರಾಗಿರುವುದು. ಅಪಾಯದ ಸೂಚನೆಗಳಲ್ಲಿ ಜೀವನಶೈಲಿಯ ಬದಲಾವಣೆ ಕೂಡಾ ಸೇರಿದೆ.
* ಅತ್ಯುತ್ತಮ ಮಧುಮೇಹ ನಿರ್ವಹಣೆ
* ಆಹಾರ ಪಥ್ಯ
* ರಕ್ತದೊತ್ತಡ ನಿಯಂತ್ರಣ
* ವ್ಯಾಯಾಮ
* ಧೂಮಪಾನವನ್ನು ಕೈಬಿಡುವುದು
ಸಾಮಾನ್ಯ ಆರೋಗ್ಯದ ಬಗ್ಗೆ

fb52c573-ec1f-4eb5-91d0-96de88c951a6

 

 

ನೀರಿನ ಬಗ್ಗೆ : 

ನೀವು ಕುಡಿಯುವ ನೀರು ನಿಮ್ಮ ಆರೋಗ್ಯವನ್ನು ಹಲವು ವಿಧದಲ್ಲಿ ರಕ್ಷಿಸುತ್ತದೆ. ಊಟಕ್ಕೆ 30 ನಿಮಿಷ ಮುಂಚೆ ನೀರು ಕುಡಿದರೆ ನೀವು ತಿನ್ನುವ ಆಹಾರದ ಜೀರ್ಣ ಕ್ರಿಯೆ ಸರಿಯಾಗಿರುತ್ತದೆ. ನೀವು ಬೆಳಿಗ್ಗೆ ಎದ್ದಾಗ ಒಂದು ಗ್ಲಾಸ್ ನೀರು ಕುಡಿದರೆ ನಿಮ್ಮ ಒಳಗಿನ ಅಂಗಾಂಗಗಳು ಸಕ್ರಿಯಗೊಳ್ಳುತ್ತವೆ.
ಸ್ನಾನಕ್ಕೆ ಮುಂಚೆ ಒಂದು ಗ್ಲಾಸ್ ನೀರು ಕುಡಿಯುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ.  ಮಲಗುವ ಮುನ್ನ ಒಂದು ಗ್ಲಾಸ್ ನೀರು ಕುಡಿಯುವುದರಿಂದ ಪಾಶ್ರ್ವವಾಯು ಮತ್ತು ಹೃದಯಸ್ತಂಭನ ತಪ್ಪಿಸಬಹುದು.  – ಡಾ.ವಿಕ್ರಮ್ ಹುಡೇದ್, ನಾರಾಯಣ ಹೆಲ್ತ್ ಸಿಟಿ

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin